ಲೋಕಸಭಾ ಚುನಾವಣಾ ಪ್ರಚಾರದ ಕಾವು ಏರತೊಡಗಿದ್ದರೆ, ಇತ್ತ ಬಿಜೆಪಿ ಎಲೆಕ್ಷನ್ ಅಖಾಡದಲ್ಲಿ ಪ್ರಣಾಳಿಕೆ ಬಾಣ ಬಿಟ್ಟಿದೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಸಂಕಲ್ಪ ಪತ್ರ” ಹೆಸರಿನ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇನ್ನುಮುಂದೆ 70 ವರ್ಷ ಮೇಲ್ಪಟ್ಟವರು ಕೂಡ ಆಯುಷ್ಮಾನ್ ಭಾರತ ಯೋಜನೆಗೆ ಒಳಪಡಲಿದ್ದಾರೆ ಎಂದರು. ಅಲ್ಲದೇ ವಯಸ್ಸಾದಂತೆ ಕಾಯಿಲೆಗಳು ಕೂಡ ಹೆಚ್ಚು ಹೀಗಾಗಿ ಇನ್ನುಮುಂದೆ ವೃದ್ಧರು ಚಿಂತಿಸಬೇಕಿಲ್ಲ, 70 ವರ್ಷ ಮೇಲ್ಪಟ್ಟವರೂ ಕೂಡ ಇನ್ನುಮುಂದೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಮೋದಿ ಸಂಕಲ್ಪ ಹೈಲೆಟ್ಸ್..!
2025 ಬುಡಕಟ್ಟು ಹೆಮ್ಮೆಯ ವರ್ಷ ಎಂದು ಆಚರಣೆ
ಪ್ರಪಂಚದಾದ್ಯಂತ ರಾಮಾಯಣ ಹಬ್ಬಆಚರಣೆ
ಅಯೋಧ್ಯೆ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ
ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿ
ಈಶಾನ್ಯ ಭಾರತದ ಅಭಿವೃದ್ಧಿಗೆ ವಿಶೇಷ ಯೋಜನೆ
ಮುಂದಿನ 5 ವರ್ಷ ಬಡವರಿಗೆ ಪಡಿತರ ಮುಂದುವರೆಯಲಿದೆ
ಜನೌಷಧಿ ಮೂಲಕ ಶೇ.80 ರಷ್ಟು ಕಡಿಮೆ ದರದಲ್ಲಿ ಔಷಧಿ
ಆಯುಷ್ಮಾನ್ ಭಾರತದ ಮೂಲಕ 5 ಲಕ್ಷ ಆರೋಗ್ಯ ಸೇವೆ
70 ವರ್ಷ ಮೇಲ್ಪಟ್ಟ ಎಲ್ಲರಿಗೂ ಆಯುಷ್ಮಾನ್ ಯೋಜನೆ
3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನ
ಮುದ್ರಾ ಯೋಜನೆಯ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ
2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ
3 ಕೋಟಿ ಲಕ್ಪತಿ ದೀದಿ ಮಾಡುವ ಗುರಿ
ಮಹಿಳಾ ಮೀಸಲಾತಿ ಜಾರಿಗೊಳಿಸುವ ಭರವಸೆ
ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು
ಬೀದಿಬದಿ ವ್ಯಾಪಾರಿಗಳ ಧನ ಸಹಾಯದಲ್ಲಿ ಏರಿಕೆ
ತೃತೀಯ ಲಿಂಗ ಸಮುದಾಯಕ್ಕೂ ಆಯುಷ್ಮಾನ್ ಭಾರತ್ ಯೋಜನೆ
ರೈತರ ವರ್ಗಕ್ಕೆ ಉತ್ತೇಜಿಸಲು ಕಿಸಾನ್ ಕ್ರೆಡಿಟ್ ಕಾರ್ಡ್