ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ. ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ..ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಹೇಳಿದ್ರು.ಈ ವೇಳೆ ನೀರಿನ ಸಮಸ್ಯೆ ಪ್ರಸ್ತಾಪಿಸಿದ ನರೇಂದ್ರ ಮೋದಿ, ಭಾರತದ ಐಟಿ ಹಬ್ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ನನಗೆ ತಾಯಿ ಚಾಮುಂಡೇಶ್ವರ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ. ತಾಯಿ ಭುವನೇಶ್ವರಿ, ತಾಯಿ ಕಾವೇರಿಗೆ ನನ್ನ ಪ್ರಣಾಮ ಸಲ್ಲಿಸುತ್ತೇನೆ ಅಂತ ಮೋದಿ ತಿಳಿಸಿದರು.
![](https://guaranteenews.com/wp-content/uploads/2024/04/WhatsApp-Image-2024-04-14-at-6.47.16-PM-1024x570.jpeg)
ಹೆಚ್.ಡಿ.ದೇವೇಗೌಡರು ದೇಶದ ಅತ್ಯಂತ ಹಿರಿಯ ನಾಯಕರು. ಅವರ ಆಶೀರ್ವಾದ ಸಿಕ್ಕಿರುವುದು ಕೂಡ ಸೌಭಾಗ್ಯ ಅಂದ್ರು. ಮೈಸೂರು, ಇಡೀ ಕರ್ನಾಟಕದ ಆಶೀರ್ವಾದ ನಮಗೆ ಸಿಗಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಇದೆ. 370 ಆರ್ಟಿಕಲ್ ವಿಧಿಯ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಕ್ಷರು ಮಾತನಾಡಿದ್ರು. 370 ಆರ್ಟಿಕಲ್ಗೂ ಕಾಶ್ಮೀರಿಗೂ ಏನು ಸಂಬಂಧ ಎಂದು ಹೇಳಿಕೆ ನೀಡಿದ್ರು. ಭಾರತ ಮಾತೆ ಜೈ ಹೇಳೋಕೆ ಯಾರ ಅನುಮತಿ ಪಡೆಯ ಬೇಕು ನೀವೆ ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಮೋದಿ ಟಕ್ಕರ್ ಕೊಟ್ಟರು.