ಟಾಲಿವುಡ್ನಲ್ಲಿ ಕಳೆದ ವರ್ಷದ ಸಂಕ್ರಾಂತಿ ಸಮಯದಲ್ಲಿ ತೆರೆಕಂಡಿದ್ದ ಹನುಮಾನ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದರ ಮುಂದುವರೆದ ಭಾಗವೇ ಜೈ ಹನುಮಾನ್ ಚಿತ್ರ. ಈ ಸಿನಿಮಾದಲ್ಲಿ ಸ್ಟಾರ್ ನಟನೊಬ್ಬ ಹನುಮಂತನ ಪಾತ್ರ ಮಾಡಿದ್ದಾರೆ, ಹನುಮಾನ್ ಗಿಂತಲೂ ಚೆನ್ನಾಗಿರುತ್ತೆ ಅಂತಾ ಪ್ರಶಾಂತ್ ವರ್ಮಾ ಹೇಳಿದ್ದರು. ಇದರಿಂದ ಈ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ಸಖತ್ ಕುತೂಹಲ ಮೂಡಿಸಿದೆ.
ಹೀಗಾಗಿ ಅನೇಕ ಸ್ಟಾರ್ ನಟರ ಹೆಸರುಗಳು ಕೇಳಿಬಂದಿದ್ದು, ಈ ಸಿನಿಮಾದಲ್ಲಿ ಶ್ರೀರಾಮನಿಗೆ ಹನುಮಂತ ಕೊಟ್ಟ ಮಾತೇ ಮುಖ್ಯ ವಿಷಯ. ಹನುಮಾನ್ ಚಿತ್ರದಲ್ಲಿ ಹನುಮಂತನಾಗಿ ನಟಿಸಿದ್ದ ತೇಜ ಸಜ್ಜ ಈ ಚಿತ್ರದಲ್ಲೂ ಅದೇ ಪಾತ್ರ ಮಾಡ್ತಾರೆ. ಜೈ ಹನುಮಾನ್ನಲ್ಲಿ ಹನುಮಂತನಾಗಿ ಯಾರು ನಟಿಸ್ತಾರೆ ಅಂತ ಕಾಯ್ತಿದ್ದ ಸಿನಿ ಪ್ರಿಯರ ಕುತೂಹಲಕ್ಕೆ ಈಸ್ಟ್ ಲುಕ್ ಬಿಡುಗಡೆ ಮಾಡಿ ತೆರೆ ಎಳೆದಿದ್ದಾರೆ. ದೀಪಾವಳಿ ಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ್ದರು.
ಇನ್ನು ಕಾಂತಾರ ಸಿನಿಮಾ ಭಾರತೀಯ ಸಿನಿಮಾ ಪ್ರೇಕ್ಷಕರ ಮನಗೆದ್ದ ಕನ್ನಡದ ಸ್ಟಾರ್ ನಟ, ನಿರ್ಮಾಪಕ ರಿಷಬ್ ಶೆಟ್ಟಿ ಜೈ ಹನುಮಾನ್ನಲ್ಲಿ ಹನುಮಂತನ ಪಾತ್ರ ಮಾಡ್ತಾರೆ ಅಂತ ಅಧಿಕೃತವಾಗಿ ಘೋಷಿಸಿದ್ದರು. ಈ ಬಗ್ಗೆ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದು, ಆ ಫಸ್ಟ್ ಲುಕ್ ಮೇಲೆ ಕೇಸ್ ಹಾಕಿದ್ದಾರೆ.
ರಾಮನ ವಿಗ್ರಹ ಹಿಡಿದು ಕೂತಿರುವ ರಿಷಬ್ ಶೆಟ್ಟಿ ಫೋಟೋ, ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಆದ್ರೆ ಮೈತ್ರಿ ಮೂವೀ ಮೇಕರ್ಸ್ನ ನವೀನ್ ಎರ್ನೇನಿ, ಯಲಮಂಚಿಲಿ ರವಿಶಂಕರ್, ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂನತ್ ವರ್ಮಾ ಮೇಲೆ ನಾಂಪಲ್ಲಿ ಕ್ರಿಮಿನಲ್ ಕೋರ್ಟ್ನಲ್ಲಿ ಕೇಸ್ ದಾಖಲಾಗಿದೆ. ನ್ಯಾಯವಾದಿ ಮಮಿಡಾಳ ತಿರುಮಲ ರಾವ್ ಅವರು ಕೇಸ್ ಹಾಕಿದ್ದಾರೆ.
ಈ ಸಿನಿಮಾದಲ್ಲಿ ಹನುಮಂತನ ಮುಖದ ಬದಲು ಹೀರೋ ರಿಷಬ್ ಶೆಟ್ಟಿ ಮುಖ ತೋರಿಸಿದ್ದನ್ನು ಕೆಲವರು ತಪ್ಪು ಎಂದು ಹೇಳಿದ್ದಾರೆ. ಮುಂದಿನ ಪೀಳಿಗೆಗೆ ಹನುಮಂತ ಯಾರು ಅಂತ ಗೊತ್ತಾಗೋದಿಲ್ಲ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಈ ವಿಷಯ ಇದೀಗ ವೈರಲ್ ಆಗಿದ್ದು, ಈ ಕೇಸ್ ಬಗ್ಗೆ ಮೈತ್ರಿ, ಪ್ರಶಾಂತ್ ವರ್ಮ, ರಿಷಬ್ ಶೆಟ್ಟಿ ಏನು ಹೇಳ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.