ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ 16ನೇ ವಾರ ಶುರುವಾಗಿದೆ. ಈ ವಾರದ ಮಧ್ಯದಲ್ಲಿಯೇ ಮನೆಯಿಂದ ಒಬ್ಬರು ಹೊರ ನಡೆಯಲಿದ್ದಾರೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇದೆ ಎಂದು ಬಿಗ್ ಬಾಸ್ ಹೇಳಿರುವುದನ್ನು ಪ್ರೋಮೋದಲ್ಲಿ ನೋಡಬಹುದು.
ಭವ್ಯಾ ಗೌಡ ಅವರು ಬಿಗ್ ಬಾಸ್ ಕನ್ನಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೂರು ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರೂ, ಅವರ ದುರಹಂಕಾರ ಮತ್ತು ತ್ರಿವಿಕ್ರಂ ಅವರ ಮೇಲಿನ ಅವಲಂಬನೆ ಅವರಿಗೆ ಹಾನಿಕಾರಕವಾಗಿದೆ. ಫೈನಲ್ಗೆ ಹೋಗುವ ಅವಕಾಶವನ್ನು ಕಳೆದುಕೊಂಡು, ಅವರು ಈಗ ಜೈಲಿನಲ್ಲಿದ್ದಾರೆ.
ಇದಕ್ಕೆ ನಾಂದಿ ಎಂಬಂತೆ ಸ್ಪರ್ಧಿ ಒಬ್ಬರನ್ನು ಟಾಸ್ಕ್ ನಿಂದ ಹೊರಗಿಡುವ ಆಟದಲ್ಲಿ ರಜತ್ ಅವರನ್ನೇ ಟಾರ್ಗೆಟ್ ಮಾಡಿ ಇಬ್ಬರೂ ಆಡಿದ್ದಾರೆ.ಬಿಗ್ ಬಾಸ್ ಮನೆಯಿಂದ ರಜತ್ ಅವರುನ್ನು ಟಾರ್ಗೆಟ್ ಮಾಡಿ ಎಲಿಮಿನೇಟ್ ಮಾಡಿದ್ದರ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನೂ 15 ದಿನವಷ್ಟೇ ಬಾಕಿಯಿದ್ದು, 8 ಜನ ಸ್ಪರ್ಧಿಗಳು ಮನೆಯಲ್ಲಿದ್ದಾರೆ.ಇದರಲ್ಲಿ ಫಿನಾಲೆಗೆ ಹೋದ ಹನುಮಂತ ಬಿಟ್ಟರೆ ಉಳಿದ 7 ಜನರಲ್ಲಿ ಇನ್ನೂ 3 ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬೇಕಿದೆ. ಭವ್ಯಾಗೌಡ ಅವರು ಇತ್ತಿಚೆಗೆ ಎರಡು ಮೂರು ವಾರಗಳಿಂದ ಆಟದಲ್ಲಿ ಮೋಸಗಳನ್ನು ಮಾಡುತ್ತ ಬರುತ್ತಿದ್ದಾರೆ. ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಕೋಪಗೊಂಡಿದ್ದಾರೆ. ರಜತ್ ಮಾತ್ರವಲ್ಲ ಕಿಚ್ಚನ್ನು ಕೋಪಗೊಂಡಿದ್ದಾರೆ. ಅದಕ್ಕೆ ತಕ್ಕ ಶಿಕ್ಷೆಯನ್ನು ಸಹ ಕೊಟ್ಟಿದ್ದಾರೆ.
ಈ ವಾರದ ಮೊದಲ ನಾಮಿನೇಷನ್ ಟಾಸ್ಕ್ ವೇಳೆ ಹನುಮಂತ ಮೇಲೆ ಭವ್ಯ ಗೌಡ ಕೈ ಮಾಡಿದ್ದರು. ಆಟ ಆಡುವ ಭರದಲ್ಲಿ ಸಿಟ್ಟಿನಿಂದ ಭವ್ಯ ಗೌಡ ಹನುಮಂತನಿಗೆ ಹೊಡೆದಿದ್ದರು. ಇದಾದ ಕೂಡಲೇ ಹನುಮಂತ ಜೋರಾಗಿ ಕೂಗಿ ಭವ್ಯ ನನಗೆ ಹೊಡೆದರು ಅಂತ ಹೇಳಿದ್ದರು. ಆಗ ರಜತ್ ಕೂಡ ಆಟವನ್ನು ನಿಲ್ಲಿಸಿ ಮತ್ತೆ ಶುರು ಮಾಡಿದ್ದರು.
ಈ ಬಾರಿ ಭವ್ಯಗೌಡ, ಹನುಮಂತನ ಮೇಲೆ ಕೈ ಮಾಡಿದ್ದ ಬಳಿಕ ಹನುಮಂತನ ಕಾಲಿಗೆ ಬಿದ್ದು ಭವ್ಯ ಗೌಡ ಕ್ಷಮೆ ಕೇಳಿದ್ದರು. ಆಗ ಬಿಗ್ಬಾಸ್ ಕಡೆಯಿಂದ ಯಾವುದೇ ಧ್ವನಿ ಬಂದಿರಲಿಲ್ಲ. ಹೀಗಾಗಿ ವೀಕ್ಷಕರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕರ್ಮ ಹಿಂದಿರುಗುತ್ತೆ ಅನ್ನೋದು ಭವ್ಯ ವಿಷಯದಲ್ಲಿ ಸತ್ಯವಾಗಿದ್ದೆ . ದುರಹಂಕಾರ ತೋರಿದಾಗ ಭವ್ಯಾ ಏಟುಗಳು ಬಿದ್ದಿದ್ದೇ ಹೆಚ್ಚಾಗಿವೆ. ಹಿಗಾಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಿಡ್ವೀಕ್ ಎಲಿಮಿನೇಷನ್ ನಲ್ಲಿ ವೀಕ್ಷಕರ ಆಕ್ರೋಶದಿಂದ ಭವ್ಯಗೌಡರವರು ಹೋರಬರುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಗ್ ಬಾಸ್ ಸೀಸನ್ 11 ರಲ್ಲಿ ಈ ವಾರವೇ ಮೂವರು ಸ್ಪರ್ಧಿಗಳು ಆಚೆ ಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದರೆ ಅದು ಹೇಗೆ ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.