ಅಸುರರು ಹಾಗೂ ದೇವತೆಗಳು ಅಮರತ್ವ ಪ್ರಾಪ್ತಿಗೆ ಸಮುದ್ರ ಮಥನಕ್ಕೆ ತೊಡಗಿದಾಗ ಉದ್ಭವಿಸಿದ ಕೊನೆಯ ವಸ್ತುವೇ ಅಮೃತ. ಅದು ರಾಕ್ಷಸರ ಕೈ ಸೇರುವುದನ್ನು ತಪ್ಪಿಸಲು ವಿಷ್ಣು, ಮೋಹಿನಿಯ ರೂಪ ತಳೆದು ಅಮೃತವನ್ನು ಕೊಂಡೊಯ್ಯುತ್ತಿದ್ದಾಗ ಅದರ ಕೆಲ ಹನಿಗಳು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಯ ಮೇಲೆ ಬಿದ್ದವು. ಹೀಗೆ ಬಿದ್ದ ಅಮೃತದ ಹನಿಗಳು ನದಿಯಲ್ಲಿ ಬೆರೆತ ಕಾರಣ ಅವುಗಳ ನೀರನ್ನು ಪವಿತ್ರ ಜಲ ಎಂದು ಪರಿಗಣಿಸಲಾಗುತ್ತದೆ. ಪಾಪ ನಾಶಕ್ಕಾಗಿ ಭಕ್ತರು ಈ ನದಿಗಳಲ್ಲಿ ಮಿಂದೇಳುತ್ತಾರೆ. ಸಮುದ್ರ ಮಥನವು ಸತತ 12 ವರ್ಷಗಳ ಕಾಲ ನಡೆದುದರಿಂದ ಪ್ರತಿ 12 ವರ್ಷಕ್ಕೊಂದು ಬಾರಿ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ. ಈ ಮೇಳವು ಸಂಕ್ರಾಂತಿಯಂದು ಮೊದಲ್ಗೊಂಡು ಶಿವರಾತ್ರಿಯಂದು ಸಮಾಪ್ತಿಯಾಗುತ್ತದೆ.
ಮಹಾ ಕುಂಭಮೇಳ ಎಂದು ಕರೆಯೋದೇಕೆ?
‘ಹಿಂದೂ ಧರ್ಮದಲ್ಲಿ ಯಾವುದೂ ಅಪೂರ್ಣವಲ್ಲ. ಎಲ್ಲವೂ ತನ್ನದೇ ಆದ ರೀತಿಯಲ್ಲಿ ಪರಿಪೂರ್ಣವಾಗಿದೆ. ಇದು ಕುಂಭಮೇಳಕ್ಕೂ ಅನ್ವಯಿಸುತ್ತದೆ. ಆದ್ದರಿಂದ ಇನ್ನು ಮುಂದೆ ಅರ್ಧ ಕುಂಭಮೇಳವನ್ನು ‘ಕುಂಭಮೇಳ’ ಎಂದೂ, ಕುಂಭಮೇಳವನ್ನು ‘ಮಹಾ ಕುಂಭಮೇಳ’ ಎಂದೂ ಕರೆಯಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ 2019ರಲ್ಲಿ ಘೋಷಿಸಿತ್ತು. ಅದರಂತೆ 2019ರ ಮೇಳವನ್ನು ಕುಂಭಮೇಳ ಹಾಗೂ 2025ರ ಮೇಳವನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತಿದೆ.
ಮೊದಲ ಕುಂಭಮೇಳ
ಕುಂಭಮೇಳವನ್ನು ಮೊದಲ ಬಾರಿ ವರ್ಧನ ಸಾಮ್ರಾಜ್ಯದ ಅರಸ ಹರ್ಷವರ್ಧನ ಕ್ರಿ.ಪೂ 644ರಲ್ಲಿ ಅಲಹಾಬಾದ್ (ಇಂದಿನ ಪ್ರಯಾಗರಾಜ್)ನಲ್ಲಿ ಆಯೋಜಿಸಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ 1954ರ ಜ.14ರಿಂದ ಮಾ.3ರ ವರೆಗೆ ಕುಂಭಮೇಳವನ್ನು ನಡೆಸಲಾಗಿತ್ತು.
ಸ್ಥಳ ನಿರ್ಧಾರ ಹೇಗೆ?
ಕುಂಭಮೇಳ ನಡೆವ ಸ್ಥಳಗಳನ್ನು ಗ್ರಹಗತಿಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಸೂರ್ಯ, ಚಂದ್ರ ಮತ್ತು ಗುರುವಿನ ಸ್ಥಾನಗಳ ಆಧಾರದಲ್ಲಿ ಇದನ್ನು ನಿರ್ಧರಿಸಲಾಗುತ್ತದೆ. ಅದರಂತೆ ಈ ಬಾರಿ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ನಡೆಯುತ್ತಿದೆ.
ಈ ಮಹಾಕುಂಭ ಮೇಳದ ವಿಶೇಷತೆ
ಹಿಂದೂಗಳ ಪಾಲಿಗೆ ಕುಂಭಮೇಳವೇ ವಿಶೇಷ ಪರ್ವವಾದರೂ, ಈ ಬಾರಿಯ ಕುಂಭ ಹಲವು ವಿಶಿಷ್ಟತೆಗಳನ್ನು ತೆರೆದಿಟ್ಟಿದೆ. ಇದು ಕೇವಲ ಧಾರ್ಮಿಕ ಸಭೆಯಾಗಿರದೆ, ಜಾಗತಿಕ ಪ್ರವಾಸೋದ್ಯಮದ ಪ್ರತೀಕ ಆಗಿರಲಿದೆ ಎಂದು ಉ.ಪ್ರ. ಸರ್ಕಾರ ಘೋಷಿಸಿದೆ. ಈ ಬಾರಿ 40 ಕೋಟಿ ಜನರ ಆಗಮನದ ನಿರೀಕ್ಷೆ ಇದ್ದು, 12 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ. ಭಕ್ತರ ಸುಗಮ ಸಂಚಾರಕ್ಕೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಭಾರತದ ಶ್ರೀಮಂತ ಪರಂಪರೆಯ ಪ್ರದರ್ಶನಕ್ಕಾಗಿ ವಿಶೇಷ ಪೆವಿಲಿಯನ್ಗಳನ್ನು ಸ್ಥಾಪಿಸಲಾಗಿದೆ. ಸಂಗಮ ಮತ್ತು ವಿಐಪಿ ಘಾಟ್ಗಳಲ್ಲಿ 2 ತೇಲುವ ಪಾರುಗಾಣಿಕಾ ನಿಲ್ದಾಣ ನಿಮ್ಮಿಸಲಾಗಿದೆ.
ಮೇಳದ ವಿಸ್ತೀರ್ಣ:
4000: ಹೆಕ್ಟೇರ್ನಲ್ಲಿ ಕುಂಭಮೇಳ
25: ಒಟ್ಟು ವಲಯಗಳು
1850: ಹೆಕ್ಟೇರ್ ವಾಹನ ನಿಲುಗಡೆಗೆ ಮೀಸಲು
ಪ್ರಸಾದದ ಜತೆ ಶ್ರೀಗಂಧ, ರುದ್ರಾಕ್ಷಿ ಸಸಿ:
ಕುಂಭದ ಆಧ್ಯಾತ್ಮಿಕ ಹಾಗೂ ಪರಿಸರ ಕಾಳಜಿಯ ಸಂಕೇತವಾಗಿ ಸಿಎಂ ಯೋಗಿ ಸೂಚನೆಯಂತೆ ಅರಣ್ಯ ಹಾಗೂ ಪರಿಸರ ಸಚಿವಾಲಯವು, ಮೇಳಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬಡೆ ಹನುಮಾನ್ ದೇವಾಲಯದಲ್ಲಿ ವಿಶೇಷ ಪ್ರಸಾದದೊಂದಿಗೆ ಶ್ರೀಗಂಧ ಹಾಗೂ ರ ನೀಡಲು ನಿರ್ಧಾರ ಮಾದಲಾಗಿದೆ.
ಮೂಲಸೌಕರ್ಯ ವ್ಯವಸ್ಥೆ :
160,000: ಟೆಂಟ್ಗಳು, 150000: ಶೌಚಾಲಯಗಳು, 1250 ಕಿಮೀ: ಪೈಪ್ಲೈನ್, 12 ಕಿಮೀ: ತಾತ್ಕಾಲಿಕ ಘಾಟ್, 67000: ಎಲ್ಇಡಿ ಲೈಟ್ಗಳು, 2000: ಸೋಲಾರ್ ದೀಪ, 30: ಪೋನ್ಟನ್ ಬ್ರಿಡ್ಜ್, 4: ವಾಟರ್ ಟವರ್.