ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಹಲವು ಸಚಿವರ ಕುರ್ಚಿಗೆ ಕಂಟಕ ಬಹುತೇಕ ಫಿಕ್ಸ್ ಅನ್ನೋದು ಮತ್ತೆ ಸಾಬೀತಾಗಿದೆ. ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ಕುರ್ಚಿ ಬಿಡಬೇಕಾಗುತ್ತದೆ. ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೇ ಹೋದರೆ ಆ ಕುರ್ಚಿಯನ್ನು ಅಲ್ಲಿಗೇ ಬಿಡಬೇಕಾಗುತ್ತದೆ. ನಾವೇ ಲೀಡ್ ಕೊಡದಿದ್ರೆ ನಾವೇನು ಮುಖ ತೋರಿಸಬೇಕು ಅಂತ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.