ಅಭಿನಯ ಚತುರ ನೀನಾಸಂ ಸತೀಶ್ ನಟ, ನಿರ್ಮಾಪಕ, ಗಾಯಕ, ಬರಹಗಾರ ಹೀಗೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ಗುರ್ತಿಸಿಕೊಂಡ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಡಿಕೆ ರವಿ ಕುರಿತಾದ ಚಂಬಲ್, ಗೋದ್ರಾ ಸಿನಿಮಾಗಳ ಬಳಿಕ ಮತ್ತೊಂದು ಅಂಥದ್ದೇ ಕ್ರಾಂತಿಕಾರಿ ಕಥಾನಕ ಆರಿಸಿಕೊಂಡಿದ್ದಾರೆ. ಅಶೋಕ ಬ್ಲೇಡ್ ಅಂತ ಶುರುವಾದ ಸಿನಿಮಾ, ಕೊನೆಯ ಹಂತ ತಲುಪುವ ವೇಳೆಗೆ ದಿ ರೈಸ್ ಆಫ್ ಅಶೋಕ ಆಗಿ ಬದಲಾಗಿದೆ.
ಹೌದು.. ಹಳೇ ಮೈಸೂರು ಭಾಗದಲ್ಲಿ ಯುವಕನೊಬ್ಬ ದೊಡ್ಡ ಸರ್ಕಾರಿ ಅಧಿಕಾರಿಯಾಗೋ ಕಥೆಯಿದು. ಅದಕ್ಕೆ ಅಡ್ಡಿಯಾಗೋ ವಿಷಯಗಳು, ಅವುಗಳನ್ನ ಆತ ಮೆಟ್ಟಿ ನಿಲ್ಲೋ ಪರಿ ನಿಜಕ್ಕೂ ಕ್ರಾಂತಿಕಾರಕವಾಗಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಂತಹ ನಿರ್ದೇಶಕ ವಿನೋದ್ ದೋಂಡಲೆ ಅವರ ಡ್ರೀಮ್ ಪ್ರಾಜೆಕ್ಟ್ ಇದು. ಅವರೇ ಎಲ್ಲವನ್ನೂ ಚಿತ್ರಿಸಿದ್ದು, ಕೊನೆಯ ಒಂದು ಶೆಡ್ಯೂಲ್ ಮಾತ್ರ ಬಾಕಿಯಿದೆ. ಹಾಗಾಗಿ ಅವರ ಟೀಂನಲ್ಲಿದ್ದ ಮತ್ತೊಬ್ಬ ಸಹ ನಿರ್ದೇಶಕ ಈ ಚಿತ್ರವನ್ನ ಮುಗಿಸಿಕೊಡೋ ಧಾವಂತದಲ್ಲಿದ್ದಾರೆ.
ಸದಾ ಭಿನ್ನ ಅಲೆಯ ಕಥೆಗಳನ್ನೇ ಆರಿಸಿಕೊಳ್ಳೋ ಸತೀಶ್, ಈ ಬಾರಿ ಅಶೋಕನಾಗಿ ಚಕ್ರವರ್ತಿ ಅಶೋಕನಂತೆ ಅಬ್ಬರಿಸಿ ಬೊಬ್ಬಿರಿಯಲಿದ್ದಾರೆ. ಫೆಬ್ರವರಿ 15ರಿಂದ ಕೊನೆಯ ಹಂತದ ಶೂಟಿಂಗ್ ಕಿಕ್ ಸ್ಟಾರ್ಟ್ ಆಗಲಿದ್ದು, ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಹಾಗೂ ನೀನಾಸಂ ಸತೀಶ್ ಈ ದಿ ರೈಸ್ ಆಫ್ ಅಶೋಕ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಕನ್ನಡದ ಜೊತೆ ತೆಲುಗು ಹಾಗೂ ತಮಿಳಿನಲ್ಲೂ ತಯಾರಾಗ್ತಿರೋ ಈ ಸಿನಿಮಾ ಇತಿಹಾಸದಲ್ಲಿ ಹುದುಗಿ ಹೋದಂತಹ ಕ್ರಾಂತಿಕಾರಿ ಯುವಕನ ಕಥಾನಕದಿಂದ ಇಂದಿನ ಯಂಗ್ ಜನರೇಷನ್ ಗೆ ಸ್ಫೂರ್ತಿಯಾಗಲಿದೆ.
ಟಿಕೆ ದಯಾನಂದ್ ಕಥೆ ಇದಾಗಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಲವಿತ್ ಸಿನಿಮಾಟೋಗ್ರಫಿ ದಿ ರೈಸ್ ಆಫ್ ಅಶೋಕ ಚಿತ್ರಕ್ಕಿರಲಿದೆ. ಅಂದಹಾಗೆ ಈ ಸಿನಿಮಾ ತಮಿಳಿನ ಮಹಾರಾಜ ಚಿತ್ರಕ್ಕಿಂತ ದೊಡ್ಡ ಮಟ್ಟಕ್ಕೆ ಹಿಟ್ ಆಗೋ ಮುನ್ಸೂಚನೆಯನ್ನ ಜಸ್ಟ್ ಫಸ್ಟ್ ಲುಕ್ ಮೋಷನ್ ವಿಡಿಯೋದಿಂದ ನೀಡಿದೆ. ಅಲ್ಲಿ ವಿಜಯ್ ಸೇತುಪತಿ ಕ್ಷೌರಿಕನಾಗಿ ಬಣ್ಣ ಹಚ್ಚಿದ್ರು. ರೆಟ್ರೋ ಕಾಲದ ಕಥೆಯನ್ನ ಮೆಟ್ರೋ ಮಂದಿಗೆ ತಲುಪಿಸೋ ನಿಟ್ಟಿನಲ್ಲಿ ಈ ಸಿನಿಮಾಗಾಗಿ ಸತೀಶ್ ತನು ಮನ ಧನವನ್ನು ಅರ್ಪಿಸಿದ್ದಾರೆ. ರೆಮ್ಯುನರೇಷನ್ ಕೂಡ ಪಡೆಯದೆ, ತಾವೇ ಸ್ವಂತ ಕೈಯಿಂದ ದುಡ್ಡು ಹಾಕಿ ಸಿನಿಮಾನ ತೆರೆಗೆ ತರೋಕೆ ಮುಂದಾಗಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್