ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ನಿಧನರಾಗಿದ್ದಾರೆ. ಅಚ್ಚರಿ ಅಂದ್ರೆ ದ್ವಾರಕೀಶ್ ಅವರು ತಮ್ಮ ಮೊದಲ ಪತ್ನಿ ಅಂಬುಜಾಕ್ಷಿ ಅವರು ಸಾವನ್ನಪ್ಪಿದ ದಿನದಂದೇ, ಅದೇ ಸಮಯಕ್ಕೆ ಕೊನೆಯುಸಿರೆಳೆದಿದ್ದಾರೆ.
ಅಂಬುಜಾಕ್ಷಿ ಅವರು 2021 ಏಪ್ರಿಲ್ 16ರಂದು ಮೃತಪಟ್ಟಿದ್ದರು, ಅದೇ ತಿಂಗಳು, ಅದೇ ದಿನ, ಅದೇ ಸಮಯಕ್ಕೇ ದ್ವಾರಕೀಶ್ ನಿಧನರಾಗಿದ್ದಾರೆ. ಅಂಬುಜಾಕ್ಷಿ ಅವರು 2021 ಏಪ್ರಿಲ್ 16ರ ಬೆಳಗ್ಗೆ 9:45ಕ್ಕೆ ನಿಧನರಾಗಿದ್ದರು. ದ್ವಾರಕೀಶ್ ಅವರು 2024 ಏಪ್ರಿಲ್ 16 ಬೆಳಗ್ಗೆ 9:45ಕ್ಕೆ ನಿಧನರಾಗಿದ್ದಾರೆ ಎಂದು ದ್ವಾರಕೀಶ್ ಪುತ್ರ ಯೋಗಿ ದ್ವಾರಕೀಶ್ ತಿಳಿಸಿದ್ದಾರೆ.