ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಗೂ ದರ್ಶನ್ ಅಭಿಮಾನಿಗಳಿಗೂ ಅವಿನಾಭಾವ ಸಂಬಂಧವಿದೆ. ಒಮ್ಮೆ ದರ್ಶನ್ ಅಭಿಮಾನಿಗಳು ಒಳ್ಳೆಯವರು ಅಂತಲೂ ಒಮ್ಮೆ ಅವಿವೇಕಿಗಳು ಅಂತಲೂ ಮಾತನಾಡುವ ಪ್ರಥಮ್ ಪ್ರತೀ ಬಾರಿ ದರ್ಶನ್ ಬಗ್ಗೆ ಮಾತನಾಡಿದಾಗ ಪೇಜಿಗೆ ಸಿಲುಕುವುದಂತೂ ಫಿಕ್ಸ್. ಅಂತಹದ್ದೆ ಒಂದು ರೀತಿಯಲ್ಲಿ ಮತ್ತೆ ಪ್ರಥಮ್ ದರ್ಶನ್ ಫ್ಯಾನ್ ಕೈಗೆ ತಗ್ಲಾಕೊಂಡಿದ್ದಾರೆ.
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಅವರನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ದರ್ಶನ್ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಪ್ರಥಮ್ ನನಗೆ ಒಂದು ದಿನದ ಮಟ್ಟಿಗೆ ಪೊಲೀಸ್ ಕಾನ್ಸ್ಟೇಬಲ್ ಕೆಲಸ ಕೊಡಿ, ಜೊತೆಗೆ ಒಂದು ಲಾಠಿ ಕೊಡಿ ದರ್ಶನ್ ಅಭಿಮಾನಿಗಳನ್ನ ಎಲ್ಲರನ್ನೂ ಬಡಿದು ಓಡಿಸುತ್ತೇನೆ ಎಂದು ಹೇಳಿಕೆ ಕೊಡುವ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಂದಿನಿಂದ ದರ್ಶನ್ ಅಭಿಮಾನಿಗಳು ಪ್ರಥಮ್ ನನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಪ್ರಥಮ್ ಗೆ ಬೆದರಿಕೆ ಕರೆಗಳು ಸಹ ಬಂದವು. ಇದರಿಂದ ಮತ್ತೆ ಪೊಲೀಸ್ಠಾಣೆ ಮೆಟ್ಟಿಲು ಹತ್ತಿದ್ದರು ನಟ ಪ್ರಥಮ್. ನಂತರ ರಾಜಿ ಸಂದಾನದ ಮೂಲಕ ಈ ಪ್ರಕರಣವನ್ನ ತಣ್ಣಗೆ ಮಾಡಿದ್ದರು ಪೊಲೀಸರು. ಅಂದಿನಿಂದಲೂ ನಟ ದರ್ಶನ್ ಅಭಿಮಾನಿಗಳು ನಟ ಪ್ರಥಮ್ ವಿರುದ್ದ ಆಕ್ರೋಶ ಹೊರ ಹಾಕುತ್ತಲೇ ಬಂದಿದ್ದಾರೆ.
ನಟ ದರ್ಶನ್ ಅವರ ಡೆವಿಲ್ ಸಿನಿಮಾ ರಿಲೀಸ್ ದಿನಾನೆ ಪ್ರಥಮ್ ಅವರ ಕರ್ನಾಟಕದ ಅಳಿಯ ಸಿನಿಮಾ ರಿಲೀಸ್ ಮಾಡ್ತೀನಿ ಎಂದು ಹೇಳಿರುವ ಪ್ರಥಮ್ ಮತ್ತೆ ದರ್ಶನ್ ಅಭಿಮಾನಿಗಳನ್ನ ಕೆಣಕಿದ್ದರು. ಆಗಲೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ಟ್ರೋಲ್ ಗಳು ಹರಿದಾಡಿದ್ದವು.
ಜೈಲಿನಿಂದ ರಿಲೀಸ್ ಆಗಿರುವ ನಟ ದರ್ಶನ್ 2025ರ ಮೊದಲ ಹಬ್ಬ ಸಂಕ್ರಾಂತಿ ಹಬ್ಬವನ್ನ ತಮ್ಮ ತೋಟದ ಮನೆಯಲ್ಲಿ ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. ಸಂಜೆಯ ವೇಳೆಗೆ ನಟ ದರ್ಶನ್ ಅವರು ಸುಮಾರು ತಿಂಗಳ ನಂತರ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂಕ್ರಾಂತಿ ಹಬ್ಬದ ಶುಭಾಷಯ ಕೋರಿ ಕುದುರೆಯ ಜೊತೆ ನಿಂತಿರುವ ಫೋಟೋ ಪೋಸ್ಟ್ ಮಾಡಿದ್ದರು.
ದರ್ಶನ್ ಅವರ ಈ ಪೋಸ್ಟ್ ಗೆ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ಲೈಕ್ಸ್ ಬಂದಿದ್ದಾವೆ ಸಾವಿರಾರು ಕಾಮೆಂಟ್ಗಳು ಹಾಕಿದ್ದಾರೆ. ಆ ಕಾಮೆಂಟ್ಗಳ ಪೈಕಿ ಪ್ರಥಮ್ ಕೂಡ ಒಂದು ಕಾಮೆಂಟ್ ಹಾಕಿದ್ದಾರೆ. ಪ್ರಥಮ್ ಅವರ ಕಾಮೆಂಟ್ ದರ್ಶನ್ ಅವರನ್ನು ವ್ಯಂಗ್ಯ ಮಾಡುವಂತಿದೆ ಎಂದು ಕೆಲವರು ಅಸಮಾಧಾನ ಹೊರ ಹಾಕಿತ್ತಿದ್ದಾರೆ.
ದರ್ಶನ್ ಇನ್ಸ್ಟಾ ಪೋಸ್ಟ್ಗೆ ಕಾಮೆಂಟ್ ಮಾಡಿ “ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್, ಆರೋಗ್ಯವಾಗಿರಿ. ಆರಾಮಾಗಿರಿ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಅನ್ನೋ ಮಾತು ಹೊಸ ವರ್ಷ ನಮ್ಮ ನಿಮ್ಮೆಲ್ಲರ ಬಾಳಲ್ಲಿ ನಡೆಯಲಿ, ಡೆವಿಲ್ ಚಿತ್ರವನ್ನು ಎಲ್ಲಾ ಕನ್ನಡಾಭಿಮಾನಿಗಳು ಗೆಲ್ಲಿಸಲಿ, ಸ್ವಲ್ಪ ಬೇಗ ‘ಡೆವಿಲ್’ ಶೂಟಿಂಗ್ ಮುಗಿಸಿ ಸರ್, ‘ಕರ್ನಾಟಕದ ಅಳಿಯ’ ಸಿನಿಮಾ ಡೆವಿಲ್ ಜೊತೆ ಬರಬೇಕು ಎಂದು ಕಾಯುತ್ತಿದ್ದೀವಿ. ಎಲ್ಲಕ್ಕಿಂತ ಮುಖ್ಯವಾಗಿ ಖುಷಿಯಾಗಿರಿ, ಚೆನ್ನಾಗಿರಿ, ನಿಮಗೂ ನಿಮ್ಮ ಮಡದಿ ವಿಜಯಲಕ್ಷ್ಮಿ ಮೇಡಂಗೂ ಸಂಕ್ರಾಂತಿ ಶುಭಾಶಯಗಳು ಸರ್” ಎಂದು ಬರೆದುಕೊಂಡಿರುವಂತೆ ಸ್ಕ್ರೀನ್ ಶಾಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆದರೇ ದರ್ಶನ್ ಪೋಸ್ಟ್ಗೆ ಕಾಮೆಂಟ್ ಬಾಕ್ಸ್ನಲ್ಲಿ ಪ್ರಥಮ್ ಅವರ ಕಾಮೆಂಟ್ ಇಲ್ಲ. ಪ್ರಥಮ್ ನಿಜಕ್ಕೂ ಈ ರೀತಿ ಕಾಮೆಂಟ್ ಮಾಡಿದ್ಧಾರ? ಅಥವ ಫೇಕ್ ಕಾಮೆಂಟ್ ಆ ಎಂಬುದು ಇನ್ನೂ ಗೊತ್ತಿಲ್ಲ. ಆದರೇ ಈ ಸ್ಕ್ರೀನ್ಶಾಟ್ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.