ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತನ್ನ ನಿರೀಕ್ಷೆ ಹೆಚ್ಚಿಸಿದೆ. 2024 – 2025ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5 ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಇದೀಗ ತನ್ನ ಅಂದಾಜು ಪರಿಷ್ಕರಿಸಿ ಶೇ. 6.8ರಷ್ಟು ಜಿಡಿಪಿ ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗೆ ಮೀರಿ ಬೆಳೆದಿರುವುದು ಮತ್ತು ಈ ವರ್ಷದಲ್ಲಿ ಪ್ರಮುಖ ಆರ್ಥಿಕ ಅಂಶಗಳು ಸದೃಢವಾಗಿರುವುದರಿಂದ ಐಎಂಎಫ್ ಮಾತ್ರವಲ್ಲ ಬಹುತೇಕ ಏಜೆನ್ಸಿಗಳು ಭಾರತದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಏ.16 ರಂದು ಬಿಡುಗಡೆ ಆದ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಐಎಂಎಫ್ ಭಾರತವನ್ನೂ ಒಳಗೊಂಡಂತೆ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆ ಬಗ್ಗೆ ಅಂದಾಜು ಪರಿಷ್ಕರಿಸಿದೆ. ಈ ವರದಿ ಪ್ರಕಾರ 2023- 24 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆಯಬಹುದು ಎಂದು ಹೇಳಿದೆ. 2024 – 25 ಹಾಗೂ 2025 – 26 ರಲ್ಲಿ ಕ್ರಮವಾಗಿ ಶೇ. 6.8 ಮತ್ತು ಶೇ. 6. 5ರಷ್ಟು ಜಿಡಿಪಿ ವೃದ್ಧಿಯನ್ನು ಭಾರತ ಕಾಣಬಹುದು ಎಂದು ಅಭಿಪ್ರಾಯಪಟ್ಟಿದೆ.