ಪ್ರಿಯಕರನೊಬ್ಬ ಪ್ರೇಯಸಿಯನ್ನೇ ಕೊಂದ ಘಟನೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿ ನಡೆದಿದೆ. ಇಮ್ದಾದ್ ಚಾಷ ಕೊಲೆ ಆರೋಪಿಯಾಗಿದ್ದು, ಉಜ್ಮಾ ಖಾನ್ ಕೊಲೆಯಾದ ಮಹಿಳೆ.
ಇವರಿಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ಹಿನ್ನೆಲೆ ಇವರಿಬ್ಬರೂ ಬೇರೆ ಬೇರೆ ಮದುವೆ ಆಗಿದ್ದರು. ನಂತರ ಇತ್ತೀಚೆಗಷ್ಟೇ ಇವರಿಬ್ಬರಿಗೂ ಡಿವೋರ್ಸ್ ಆಗಿ ಮತ್ತೆ ಪರಸ್ಪರ ಸಂಪರ್ಕ ಹೊಂದಿದ್ದರು. ಡಿಸೆಂಬರ್ 31 ರಂದು ಕುಂದಲಹಳ್ಳಿಯಲ್ಲಿ ಇಬ್ಬರು ಭೇಟೀಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ನಂತರ ಉಜ್ಮಾ ಖಾನ್ ನನ್ನು ಆರೋಪಿ ಇಮ್ದಾದ್ ಬಾಷ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಸಂಬಂಧಿಕರಿಗೆ ನಾವು ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಸೇಜ್ ಮಾಡಿದ್ದ ಆರೋಪಿ ಇಮ್ದಾದ್ ಬಾಷ.
ಇನ್ನು ಮಹಿಳೆಯ ಪೋರ್ಸ್ ಮಾರ್ಟಂ ರಿಪೋರ್ಟ್ನಲ್ಲಿ ಇಮ್ದಾದ್ ಬಾಷ ಮಸೇಜ್ ಮಾಡೋಕು ಹತ್ತು ಗಂಟೆಯ ಹಿಂದೆಯೇ ಮಹಿಳೆ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಮತ್ತೊಬ್ಬ ಟೆಕ್ಕಿ ಯುವಕನ ಸಂಪರ್ಕದಲ್ಲಿ ಈ ಮಹಿಳೆ ಇದ್ಲು. ಆತನ ಜೊತೆ ಮದುವೆ ತಯಾರಿ ನಡೆಸಿದ್ದಳು ಎಂಬ ತಿಳಿದು ಬಂದಿದೆ. ಈ ಹಿನ್ನೆಲೆ ಉಜ್ಮಾ ಖಾನ್ ನನ್ನು ಕೊಲೆ ಮಾಡಿರುವುದಾಗಿ ಇಮ್ದಾದ್ ಹೇಳಿಕೆ ನೀಡಿದ್ದಾನೆ.
ಇನ್ನು ಆರೋಪಿ ಇಮ್ದಾದ್ ಬಾಷ ನನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಉಜ್ಮಾ ಖಾನ್ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.