ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್ 2025 ಮಂಡಿಸಿದರು. ಇದು ಅವರ 16ನೇ ಬಜೆಟ್ ಆಗಿದ್ದು, ಅತಿಹೆಚ್ಚು ಬಜೆಟ್ ಮಂಡನೆಯಾಗಿದೆ. ರಾಜ್ಯ ಬಜೆಟ್‌ನ ಹೈಲೈಟ್ಸ್ ಇಂತಿವೆ.
ಬಜೆಟ್‌ನ ಹೈಲೈಟ್ಸ್ ಇಂತಿವೆ
ಕೃಷಿ ಮತ್ತು ತೋಟಗಾರಿಗೆ ರೂ. 7,145 ಕೋಟಿ
ಆಹಾರ ಮತ್ತು ನಾಗರಿಕ ಸರಬರಾಜು ರೂ 8,275 ಕೋಟಿ
ಲೋಕಾಪಯೋಗಿ ಇಲಾಖೆಗೆ 11,841 ಕೋಟಿ ಅನುದಾನ
ಶಿಕ್ಷಣ
ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 1 ಸಾವಿರ ಹೆಚ್ಚಳ
ಅತಿಥಿ ಶಿಕ್ಷಕರ ಗೌರವ ಧನ ಹೆಚ್ಚಳ
ಮಾಸಿಕ ಗೌರವ ಧನ ತಲಾ ರೂ. 2000 ಹೆಚ್ಚಳ
ಶಾಲಾ ಮಕ್ಕಳಿಕೆ ಮೊಟ್ಟೆ, ಬಾಳೆಹಣ್ಣು ವಿತರಣೆ 6 ದಿನಕ್ಕೆ ವಿಸ್ತರಣೆ
ವಾರದಲ್ಲಿ 6 ದಿನ ಮೊಟ್ಟೆ ವಿತರಣೆಗೆ ರೂ. 1,500 ಕೋಟಿ
500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭ
100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು
50 ಪ್ರೌಢ ಶಾಲೆಗಳ ಉನ್ನತೀಕರಣ
ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯು ಅನುದಾನ
2500 ಕೋಟಿ ವೆಚ್ಚದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ
ರಾಗಿ ಮಾಲ್ಟ್ ವಿತರಿಸಲು 100 ಕೋಟಿ ಅನುದಾನ
ಬೆಂಗಳೂರಿಗೆ ಬಂಪರ್
ಬೆಂಗಳೂರಿನ ಅನುದಾನ 7 ಸಾವಿರ ಕೋಟಿ ರೂಪಾಯಿ ಏರಿಕೆ
ಬೆಂಗಳೂರಿನಲ್ಲಿ ಟನಲ್ ಯೋಜನೆಗೆ 40 ಸಾವಿರ ಕೋಟಿ ಅನುದಾನ
ರಾಜ್ಯಸರ್ಕಾರದಿಂದ 19 ಸಾವಿರ ಕೋಟಿ ಶ್ಯೂರಿಟಿ
ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 2000 ಕೋಟಿ ರೂ
ಈ ರಸ್ತೆಗಾಗಿ 660 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
120ಕಿ.ಮೀ ಉದ್ದದ ಫ್ಲೈಓವರ್ & ಗ್ರೇಡ್ ಸಪರೇಟರ್
ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಮೀಸಲಾತಿ ಘೋಷಣೆ
2A, 2B ಪ್ರವರ್ಗದ ಗುತ್ತಿಗೆದಾರರಿಗೆ ಮೀಸಲಾತಿ
2 ಕೋಟಿವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ
ಬೆಂಗಳೂರಿಗೆ ಭದ್ರತೆ
ಬೆಂಗಳೂರಿನ 8 ಪೊಲೀಸ್ ವಿಭಾಗ 11ಕ್ಕೆ ಏರಿಕೆ
ಬೆಂಗಳೂರಲ್ಲಿ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪನೆ
ಸಿನಿಮಾ
ಚಿತ್ರಗಳಿಗೆ 200 ರೂಪಾಯಿ ದರ ನಿಗದಿಗೊಳಿಸಿದ ಸರ್ಕಾರ
ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪದ ದರ ನಿಗದಿಗೊಳಿಸಿದ ಸರ್ಕಾರ
ಹಳೆ ಚಿತ್ರಗಳ ಸಂರಕ್ಷಣೆಗೆ 3 ಕೋಟಿ ವೆಚ್ಚ
3 ಕೋಟಿ ವೆಚ್ಚದಲ್ಲಿ ಚಲನಚಿತ್ರ ಭಂಡಾರ ಸ್ಥಾಪನೆ
ರಾಜ್ಯದಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ ಸ್ಥಾಪನೆ
ಗೃಹಲಕ್ಷ್ಮೀ ಫಲಾನುಭವಿಗಳು ಅಕ್ಕ ಕೋ ಆಪರೇಟಿವ್ ವ್ಯಾಪ್ತಿಗೆ
ರಾಜ್ಯದಲ್ಲಿ 16 ಹೊಸ ಮಹಿಳಾ ಕಾಲೇಜು ಸ್ಥಾಪನೆ
ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತ ಏರಿಕೆ
60 ಸಾವಿರದಿಂದ 72 ಸಾವಿರಕ್ಕೆ ತಸ್ತೀಕ್ ಮೊತ್ತ ಏರಿಕೆ
ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆ
ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕ್ಕಿಂಗ್‌ಗೆ ವ್ಯವಸ್ಥೆ
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ‘ಅನ್ನ ಸುವಿಧಾ’
75 ವರ್ಷ ಮೇಲ್ಪಟ್ಟ ಹಿರಿಯ 3.30 ಲಕ್ಷ ಫಲಾನುಭವಿಗಳು
ಕೃಷಿ ಕ್ಷೇತ್ರಕ್ಕೆ ಕೊಡುಗೆ
2025-26 ಸಾಲಿನಲ್ಲಿ 50 ಸಾವಿರ ರೈತರಿಗೆ ಸಹಾಯಧನ
10 ತಾಲೂಕುಗಳಲ್ಲಿ ಸಮಗ್ರ ಕೃಷಿ ಪದ್ದತಿ ಪ್ರಾತ್ಯಕ್ಷಿಕೆ
ನೀರಾವರಿ ಘಟಕಗಳ ಅಳವಡಿಕೆಗೆ ರೂ 440 ಕೋಟಿ ಅನುದಾನ
1.81 ಲಕ್ಷ ರೈತರಿಗೆ ಹನಿ & ತುಂತುರು ನೀರಾವರಿ ಘಟಕ
ಸಹಾಯಧನ ನೀಡಲು ಒಟ್ಟು 428 ಕೋಟಿ ಅನುದಾನ ಮೀಸಲು
ಹಸು, ಎಮ್ಮೆ ಎತ್ತುಗಳಿಗೆ 10 ಸಾವಿರದಿಂದ ರೂ. 1500 ಹೆಚ್ಚಳ
ಜಾನುವಾರಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರ ಹೆಚ್ಚಳ
ಕರಾವಳಿ 3 ಜಿಲ್ಲೆಗಳಲ್ಲಿ ಕಡಲಕೊರೆತ ತಪ್ಪಿಸಲು ಅನುದಾನ
ಕರಾವಳಿ, ಮಲೆನಾಡು ಜಿಲ್ಲೆಗಳಿಗೆ 200 ಕೋಟಿ ಅನುದಾನ
ಭೂಕುಸಿತ ತಡೆಗಟ್ಟಲು 200 ಕೋಟಿ ಅನುದಾನ
ರಾಜ್ಯದಲ್ಲಿ ಮತ್ತಷ್ಟು ದುಬಾರಿಯಾಗಲಿದೆ ಮದ್ಯದ ದರ
ಅಬಕಾರಿ ಇಲಾಖೆಗೆ 36,500 ಕೋಟಿ ಆದಾಯದ ಟಾರ್ಗೆಟ್
ವಿತ್ತೀಯ ಕೊರತೆ 90,428 ಕೋಟಿ ರೂಪಾಯಿ
ಈ ಬಾರಿ ಸರ್ಕಾರದ ಒಟ್ಟು ಸಾಲ 1,16,000 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 11,473 ಕೋಟಿ ರೂ.
ಕಂದಾಯ 17,201 ಕೋಟಿ, ಸಮಾಜ ಕಲ್ಯಾಣಕ್ಕೆ 16,955 ಕೋಟಿ ಅನುದಾನ
ರಾಜ್ಯ ಭದ್ರತೆಗೆ ಒತ್ತು
ಬೆಂಗಳೂರಿನಾದ್ಯಂತ 7,500 ಕ್ಯಾಮರಾ ಅಳವಡಿಕೆ
ಸಮಾಜದಲ್ಲಿ ಗಲಭೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ
ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಮಹಿಳೆಯ ಭದ್ರತೆ ವಿಶ್ವಾಸ ಹೆಚ್ಚಿಸಲು ಕ್ರಮ
ದೌರ್ಜನ್ಯಕ್ಕೆ ಒಳಗಾದ ಮಹಿಳೆ, ಮಕ್ಕಳಿಗೆ ನೆರವು
ಕೈಗಾರಿಕಾ ಪ್ರದೇಶ ಬೂಮಿ ಹಂಚಿಕೆಯಲ್ಲೂ ಮೀಸಲಾತಿ
ನಕ್ಸಲ್ ಮುಕ್ತ ರಾಜ್ಯ
6 ನಕ್ಸಲರ ಶರಣಾಗತಿ ಹಿನ್ನೆಲೆ ನಕ್ಸಲ್ ಮುಕ್ತ ರಾಜ್ಯ
ನಕ್ಸಲ್ ನಿಗ್ರಹ ಪಡೆ ವಿಸರ್ಜನೆ
ನಕ್ಸಲ್ ಪೀಡಿತ ಪ್ರದೇಶಗಳ ಮೂಲಸೌಕರ್ಯಕ್ಕೆ 10 ಕೋಟಿ ರೂ.
ಸಣ್ಣ ನೀರಾವರಿ
ಮಧುಗಿರಿ 45, ಕೊರಟಗೆರೆಯಲ್ಲಿ 62 ಕೆರೆ ತುಂಬಿಸುವ ಗುರಿ
ಮಹಿಳೆಯರಿಗೆ ಭದ್ರತೆ
ನಗರದಾದ್ಯಂತ 60 ಮಹಿಳಾ ಪೊಲೀಸ್ ಔಟ್‌ಪೋಸ್ಟ್ ಸ್ಥಾಪನೆ
ಪಶು ಸಂಮಗೋಪನೆ ಇಲಾಖೆ
ಪಶು ಸಂಗೋಪನೆ ಹೈನುಗಾರಿಕೆಗೆ ರೂ 3,977 ಕೋಟಿ ಅನುದಾನ
ಕುರಿ ಮೇಕೆಗೆ ನೀಡುತ್ತಿರುವ ರೂ. 5 ಸಾವಿರ 7500 ಕ್ಕೆ ಹೆಚ್ಚಳ
ಯುವಸಬಲೀಕರಣ & ಕ್ರೀಡೆ
5 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ
12 ತಾಲೂಕಿನಲ್ಲಿ 2 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ
ಬಾಂಬ್ ಪತ್ತೆ, ನಿಷ್ಕ್ರಿಯ ದಳ ವಿಸ್ತರಣೆ
ಬಂದೋಬಸ್ತ್ ಪೊಲೀಸರ ಆಹಾರ ಭತ್ಯೆ 200ರಿಂದ 300ಕ್ಕೇರಿಕೆ
ಕನ್ನಡ ಮತ್ತು ಸಂಸ್ಕೃತಿ
ಕಲಾವಿದರ ಮಾಸಾಶನ ರೂ 2000 ರಿಂದ 2500 ರೂ ಹೆಚ್ಚಳ
ಅಗ್ನಿ ಅವಘಡ ತಡೆಯಲು ಕ್ರಮ
ಮೈಸೂರಲ್ಲಿ 3 ಕೋಟಿ ವೆಚ್ಚದ ಅಗ್ನಿ ಶಾಮಕ ಠಾಣೆ ನಿರ್ಮಾಣ
ಬಹುಮಹಡಿ ಕಟ್ಟಡದ ಅಗ್ನಿ ಅವಘಡ ತಡೆಯಲು ಕ್ರಮ
ಕಂದಾಯ
100 ಕೋಟಿ ವೆಚ್ಚದಲ್ಲಿ ಕೃಷಿ ಹೊಂಡಗಳ ನಿರ್ಮಾಣ
ಬೆಣ್ಣೆಹಳ್ಳ ಪ್ರವಾಹ ತಡೆಯಲು 200 ಕೋಟಿ ರೂಪಾಯಿ
ಬೆಂಗಳೂರಿನ 36 ನೋಂದಣಿ ಕಚೇರಿಗಳ ಆಧುನೀಕರಣ