ಕನ್ನಡದ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನು 6 ದಿನಗಳು ಮಾತ್ರ ಭಾಕಿ ಉಳಿದಿದೆ. ಸದ್ಯ 7 ಮಂದಿ ಉಳಿದುಕೊಂಡಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಇದೆ ಎನ್ನುವಾಗಲೇ ಬಿಗ್ಬಾಸ್ ಮನೆಯಿಂದ ಗೌತಮಿ ಜಾಧವ್ ಔಟ್ ಆಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ದೊಡ್ಮನೆಯಿಂದ ಯಾವ ಸ್ಪರ್ಧಿ ತನ್ನ ಆಟವನ್ನು ಮುಗಿಸಲಿದ್ದಾರೆ ಅಂತ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಇದರ ಮಧ್ಯೆ ಭಾನುವಾರದ ಸಂಚಿಕೆಗೆ ಕಿಚ್ಚ ಸುದೀಪನ ಎಂಟ್ರಿಯಾಗಿದ್ದು, ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ್ ಎಪಿಸೋಡ್ನ ಪ್ರೋಮೋದಲ್ಲಿ ಹನುಮಂತ ರಜತ್ಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಮನೆ ಮಂದಿ ಮುಂದೆ ಯಾರ ಕತೆ ಹಿಟ್, ಯಾರ ಕತೆ ಫ್ಲಾಪ್ ಎಂದು ಕೇಳಿದ್ದಾರೆ. ಆಗ ಒಬ್ಬೊಬ್ಬರೇ ಎಂಟ್ರಿ ಕೊಟ್ಟು ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಕತೆ ಹಿಟ್ ಆಗಿದೆ, ಯಾರ ಕತೆ ಫ್ಲಾಪ್ ಆಗಿದೆ ಅಂತ ಹೇಳಿದ್ದಾರೆ.
ಆಗ ಹನುಮಂತ, ಫ್ಲಾಪ್ ಜಾಗಕ್ಕೆ ರಜತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಜತ್ ಅಣ್ಣ ಸಿಲ್ಲಿ ರೀಸನ್, ಜುಟ್ಟು ರೀಸನ್ ಕೊಡ್ತಾರೆ. ಆದ್ರೆ ಅವನಿಗೆ ಸರಿಯಾಗಿ ರೀಸನ್ ಕೊಡೋದಕ್ಕೆ ಬರೋದಿಲ್ಲ ಅಂತ ಹೇಳಿದ್ದಾರೆ. ಆಗ ಕೋಪಗೊಂಡ ರಜತ್ ಮಾವ ಮಾವ ಅಂತ ಮಾವನಿಗೆ ಚುಚ್ಚಿಬಿಟ್ಟೆ, ನೀನು ಮಾಡಿರೋ ಡವ್ಗಳನ್ನು ನಾವು ನೋಡಿದ್ದೇವೆ. ನಾನಂತೂ ನೋಡಿಲ್ಲ ನೀನು ಸ್ಟ್ರಾಂಗ್ ಆಗಿ ರೀಸನ್ ಕೊಟ್ಟಿರೋದನ್ನು ಅಂತ ಹೇಳಿದ್ದಾರೆ. ಆಗ ಹನುಮಂತ ಮೊದಲು ಸಿಲ್ಲಿ ರೀಸನ್ ಅರ್ಥ ಮಾಡಿಕೋ, ಆಮೇಲೆ ಸ್ಟ್ರಾಂಗ್ ರೀಸನ್ ಕೊಡುವಂತೆ ಅಂತ ಕಿಚ್ಚ ಸುದೀಪ್ ಮುಂದೆಯೇ ರಜತ್ಗೆ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂದು ಹಾಡನ್ನು ಹಾಡುವ ಮೂಲಕವೇ ಹನುಮಂತ ಪಂಚ್ ಕೊಟ್ಟಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ನಕ್ಕಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ; https://whatsapp.com/channel/0029VafyCqRFnSzHn1JWKi1B