ಬೆಂಗಳೂರು : ಬೆಂಗಳೂರಲ್ಲಿ ಜೈಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪೊಲೀಸರು ಇಬ್ಬರು ಅಪ್ರಾಪ್ತ ಹುಡುಗರು ಸೇರಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನಕ್ಕೊಳಗಾದ ನಾಲ್ವರು ಆರೋಪಿಗಳನ್ನ ವಿಚಾರಣೆ ನಡೆಸುತ್ತಿದ್ದು, ನಮಗೆ ಯಾವುದೇ ಪ್ರೀಪ್ಲ್ಯಾನ್ ಆಗಲಿ, ಹಲ್ಲೆ ನಡೆಸುವ ಉದ್ದೇಶವಾಗಲಿ ಇರಲಿಲ್ಲ ಎಂದು ಆರೋಪಿಗಳು ಪೊಲೀಸರ ಮುಂದೆ ಹೇಳಿದ್ದಾರಂತೆ. ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೈಕ್ನಲ್ಲಿ ಬರುತ್ತಿದ್ವಿ. ಎಂಎಸ್ ಪಾಳ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕಾರಿನಲ್ಲಿ 3-4 ಹುಡುಗರು ಬಂದು ನಮ್ಮ ಬಳಿ ನಿಲ್ಲಿಸಿದರು. ಆಗ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತಾ ಜೋರಾಗಿ ಕೂಗಾಡಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಕೂಗಿ ಅಂತಾ ಒತ್ತಾಯ ಮಾಡಿದರು. ಅದಕ್ಕೆ ನಾವು ನೀವೇ ಅಲ್ಲಾಹು ಅಕ್ಬರ್ ಅಂತಾ ಕೂಗಿ ಅಂತ ಹೇಳಿದೇವು. ನಾವು ಯಾಕೆ ಕೂಗಬೇಕು ವಾಗ್ವಾದ ನಡೆಯಿತು. ಆಗ ಕೈಕೈ ಮಿಲಾಯಿಸುವ ಹಂತ ತಲುಪಿತು ಅಂತ ಹೇಳಿದ್ದಾರೆ. ಯಾವುದೇ ಬೇರೆ ಉದ್ದೇಶ ಇರಲಿಲ್ಲ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.