ರಾಜ್ಯದಲ್ಲಿ ಗೋಹತ್ಯೆ ಮತ್ತು ಗೋಹಿಂಸೆ ಹೆಚ್ಚಾಗುತ್ತಿದ್ದು, ಹೊನ್ನಾವರದಲ್ಲಿ ಹಸುವಿನ ತಲೆ ಕಡಿದು ಕೊಂದು ಮಾಂಸ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇದೀಗ ಕಾರವಾರ ಭಾಗಗಲ್ಲಿ ದನಗಳ ಕಳ್ಳತನ ಮಾಡಿದ್ದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐ.ಪಿ.ಎಸ್ ನಾರಾಯಣ ಎಮ್ ಪೊಲೀಸ್ ಅಧೀಕ್ಷಕರು, ಎಮ್. ಜಗದೀಶ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮಹೇಶ ಕೆ ಪೊಲೀಸ್ ಉಪಾಧೀಕ್ಷಕರು, ಇವರ ಮಾರ್ಗದರ್ಶನದಲ್ಲಿ ಸಿದ್ದರಾಮೇಶ್ವರ ಎಸ್. ಪೊಲೀಸ್ ನಿರೀಕ್ಷಕರು, ಸಂತೋಷ ಕಾಯ್ಕಿಣಿ, ಯೋಗೇಶ ಕೆ. ಇವರ ನೇತೃತ್ವದಲ್ಲಿ ಹೊನ್ನಾವರ ಪೊಲೀಸ್ ಠಾಣೆಯ ಎಲ್ಲಾ ಪಿ.ಎಸ್.ಐ ಹಾಗೂ ಉಪವಿಭಾಗದ ಪಿ.ಎಸ್.ಐ ಗಳಾದ ಭರತ, ರವಿ ಗುಡಿ. ಮಯೂರ, ಶ್ರೀಕಾಂತ ರಾಠೋಡ, ಖಾದರ ಪಾಷಾ ಇವರುಗಳನ್ನೊಳಗೊಂಡ ಮೂರು ತಂಡಗಳು ಈ ಪ್ರಕರಣದ ತುರ್ತು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರಾದ ಅಲ್ತಾಪ್ ತಂದೆ ಅಹಮ್ಮದ್ ಕಾಟಾಪುರುಸು( 28 ), ಹೊನ್ನಾವರ ತಾಲೂಕಿನ ಅಪ್ಪಾರ್ ಕಾಲೋನಿಯ ನಿವಾಸಿಯಾಗಿದ್ದ ಇವರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಮತೀನ್ ತಂದೆ ಅಹಮ್ಮದ್ ಕಾಟಾಪುರುಸು (37), ಹೊನ್ನಾವರ ತಾಲೂಕಿನ ಅಪ್ಪಾರ್ ಕಾಲೋನಿನ ನಿವಾಸಿಯಾಗಿದ್ದು, ಇವರು ಕೂಲಿ ಕೆಲಸ ಮಾಡುತ್ತಿದ್ದರು. ಮಹಮ್ಮದ್ ಹುಸೇನ್ ತಂದೆ ಅಬ್ಬಾಸ ಕುರ್ವೇ (36 ), ಹೊನ್ನಾವರ ತಾಲೂಕಿನ ಹೆರಂಗಡಿಯ ಕುರ್ವಾ ಗ್ರಾಮದ ನಿವಾಸಿಯಾಗಿದ್ದು ಅಡುಗೆ ಕೆಲಸ ನಿರ್ವಹಿಸುತ್ತಿದ್ದನು.
ದನಗಳ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ದಸ್ತಗಿರಿ ಮೂಲಕ ಕಾರ್ಯಾಚರಣೆ ಮಾಡಿ, ಬಂಧಿಸಿದ್ದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತರಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಉತ್ತರಕನ್ನಡ ಜಿಲ್ಲೆ, ಕಾರವಾರ ಜನತೆ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc