ಮೈಕ್ರೋ ಫೈನಾನ್ಸ್ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಮುಖ್ಯಮಂತ್ರಿಗಳು ನಾಳೆಯೇ ಈ ಕುರಿತು ತುರ್ತು ಸಭೆ ಕರೆದಿದ್ದಾರೆ. ವಿಶೇಷ ಕಾನೂನು ರಚಿಸಲು ಹಾಗೂ ಶೋಷಣೆಯ ಪ್ರಕರಣಗಳನ್ನು ಮಟ್ಟ ಹಾಕಲು ಏನು ಮಾಡಬೇಕೆಂದು ನಿರ್ಧರಿಸಬೇಕಿದೆ. ಮೈಕ್ರೊ ಫೈನಾನ್ಸ್ ಏಜೆನ್ಸಿಗಳಿಂದಾಗುತ್ತಿರುವ ಶೋಷಣೆಯ ಬಗ್ಗೆ ಕಾನೂನು ರಚಿಸಲು ಸಾಧ್ಯವಾಗಿಲ್ಲ. ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್ ರೆಗ್ಯೂಲೇಶನ್ ಆಫ್ ಮನಿ ಲೆಂಡಿಂಗ್ ಬಿಲ್ ರೂಪಿಸಲು ಸರ್ಕಾರ ಚಿಂತನೆ ಮಾಡುತ್ತಿದೆ. ನಾಳೆ ಇದನ್ನು ಮಂಡನೆ ಮಾಡಿ ಹಲವಾರು ವಿಷಯಗಳ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದರು.
ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿ:
“ಅಧ್ಯಾದೇಶಗಳು ಒಳಗೊಂಡಂತೆ ಶಾಸನಗಳ ಪ್ರಸ್ತಾವಗಳು, ಆದರೆ ಪೂರ್ಣವಾಗಿ ಔಪಚಾರಿಕ ಸ್ವರೂಪದ ಅಥವಾ ಅತೀ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳೆಂದು ಮುಖ್ಯಮಂತ್ರಿಯವರು ಅಭಿಪ್ರಾಯ ಪಡುವ ಪ್ರಸ್ತಾವಗಳನ್ನು ಹೊರತುಪಡಿಸಿ” ಎಂಬ ನಿಯಮವನ್ನು ತಿದ್ದುಪಡಿ ಮಾಡಿ ತುರ್ತು ಸಂದರ್ಭಗಳಲ್ಲಿ ರಾಜ್ಯ ಸಚಿವ ಸಂಪುಟದ ಪೂರ್ವಾನುಮೋದನೆ ಇಲ್ಲದೇ ರಾಜ್ಯ ವಿಧಾನ ಮಂಡಲದಲ್ಲಿ ವಿಧೇಯಕಗಳನ್ನು ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುತ್ತದೆ. ಇಂತಹ ಪ್ರಸ್ತಾವನೆಗಳಿಗೆ ಘಟನೋತ್ತರ ಮಂಜೂರಾತಿ ಪಡೆಯಲು ಈ ತಿದ್ದುಪಡಿಯಲ್ಲಿ ಅವಕಾಶ ನೀಡುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಮೊತ್ತದ ಹಣ ಕೊಟ್ಟು ರಾಜ್ಯದ ಬೊಕ್ಕಸಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ನ್ಯಾಯಯುತವಾದ ಅಭಿವೃದ್ಧಿ ಕೆಲಸಗಳಾಗಲು ಉತ್ತಮ ವಾತಾವರಣ ಸೃಷ್ಟಿಯಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಮುಖ್ಯಮಂತ್ರಿಗಳು ನಿರ್ಧಾರ ಮಾಡಿ ಬಿಲ್ ಅಥವಾ ಅಧ್ಯಾದೇಶ ಕಳಿಸುವ ಸಂದರ್ಭ ಬಂದಾಗ ಸಚಿವ ಸಚಿವ ಸಂಪುಟ ದಲ್ಲಿಟ್ಟು ನಂತರವೇ ಹೋಗಬೇಕಿತ್ತು. ರಾಜ್ಯಪಾಲರು ಮುಖ್ಯಮಂತ್ರಿಗಳ ಹಂತದಲ್ಲಿಯೇ ಆಗಬಹುದು ಎಂದಾದರೆ Transaction of Business Rules ನ್ನು ತಿದ್ದುಪಡಿ ಮಾಡಿಕೊಳ್ಳುವಂತೆ ಸಲಹೆ ಕೊಟ್ಟ ಮೇರೆಗೆ ವ್ಯವಹಾರ ಸುಗಮ ನಿರ್ವಹಣೆ -Transaction of Business Rules ನ್ನು ತಿದ್ದುಪಡಿ ಮಾಡಿ ಅದರ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದರು. ರಾಜ್ಯಪಾಲರು ಹಲವಾರು ಬಿಲ್ಲುಗಳನ್ನು ಹಿಂತಿರುಗಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಲಾಗುವುದು ಎಂದು ಸಚಿವರು ಇದೆ ಸಂದರ್ಭದಲ್ಲಿ ತಿಳಿಸಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc