ಚೀನಾದಲ್ಲಿ ವಾಟ್ಸಾಪ್ ಬ್ಯಾನ್ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಚೀನಾ ಸರ್ಕಾರದ ಆದೇಶದ ಅನುಸಾರ ಆ್ಯಪಲ್ ತನ್ನ ಚೀನಾ ಆ್ಯಪ್ ಸ್ಟೋರ್ನಿಂದ ವಾಟ್ಸಾಪ್ ಮತ್ತು ಥ್ರೆಡ್ಸ್ ಆ್ಯಪ್ಗಳನ್ನುನಿಷೇಧ ಮಾಡಲಾಗಿದೆ. ವಾಟ್ಸಾಪ್ ಮತ್ತು ಥ್ರೆಡ್ನಿಂದ ದೇಶದ ಭದ್ರತೆಗೆ ಅಪಾಯ ಆಗುತ್ತದೆ ಎಂಬ ಕಾರಣಕ್ಕೆ ಆ 2 ಆ್ಯಪ್ಗಳನ್ನು ಚೀನಾ ನಿಷೇಧಿಸಿದೆ.
ಹೀಗಾಗಿ, ಆ್ಯಪಲ್ನ ಆ್ಯಪ್ ಸ್ಟೋರ್ನಿಂದ ಅದನ್ನು ತೆಗೆಯಲಾಗಿದೆ. ಇದು ಚೀನಾದಲ್ಲಿ ಮಾತ್ರ ಅನ್ವಯ ಆಗುತ್ತದೆ.
‘ನಾವು ಕಾರ್ಯಾಚರಿಸುವ ದೇಶಗಳಲ್ಲಿನ ಕಾನೂನುಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದ್ದರೂ ಅವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗುತ್ತದೆ.
ರಾಷ್ಟ್ರೀಯ ಭದ್ರತಾ ಅಪಾಯ ಇದೆ ಎಂಬ ಕಾರಣಕ್ಕೆ ಈ ಆ್ಯಪ್ಗಳನ್ನು ಸ್ಟೋರ್ನಿಂದ ತೆಗೆಯುವಂತೆ ಚೀನಾದ ಸೈಬರ್ಸ್ಪೇಸ್ ಆಡಳಿತ ಆದೇಶ ಮಾಡಿದೆ.