ಪಂಜಾಬ್ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಮ್ಯಾಚ್ ಮುಗಿದ ನಂತರ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ವಿಧಿಸಿದೆ. ಮ್ಯಾಚ್ ಕೋಡ್ ಆಫ್ ಕಂಡಕ್ಟ್ನ ಮುರಿದ ಕಾರಣ ದಂಡ ವಿಧಿಸಲಾಗಿದೆ ಅಂತ ಕಾರಣ ನೀಡಲಾಗಿದೆ. ನಿಗದಿತ ಸಮಯಕ್ಕೆ ಓವರ್ ಪೂರ್ಣಗೊಳಿಸದ ಕಾರಣ ಫೈನ್ ಹಾಕಿದ್ದೇವೆ ಅಂತ ಬಿಸಿಸಿಐ ಹೇಳಿದೆ.
20 ಓವರ್ಗಳನ್ನು ಪೂರ್ಣಗೊಳಿಸಲು ಬಿಸಿಸಿಐ ನಿಗದಿತ ಸಮಯ ನೀಡಿತ್ತು. ಆದರೆ, ಆ ಟೈಮ್ನಲ್ಲಿ 20 ಓವರ್ಗಳನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಈ ರೀತಿ ದಂಡದ ಶಿಕ್ಷೆ ನೀಡಿದ್ದಾರೆ.