2025ರ ಮೌನಿ ಅಮಾವಾಸ್ಯೆಯನ್ನು ಜನವರಿ 29ರಂದು ಬುಧವಾರ ಆಚರಿಸಲಾಗುವುದು. ಪುಷ್ಯ ಮಾಸದ ಮೌನಿ ಅಮಾವಾಸ್ಯೆಯ ನಂತರ ಮಾಘ ಮಾಸವು ಆರಂಭವಾಗುವುದು. ಮೌನಿ ಅಮಾವಾಸ್ಯೆಯ ದಿನದಂದು ಮೌನ ವ್ರತವನ್ನು ಹಾಗೂ ಉಪವಾಸವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಪವಿತ್ರ ನದಿಗಳಲ್ಲಿ ಹಾಗೂ ಸಂಗಮಗಳಲ್ಲಿ ಸ್ನಾನ ಕೂಡ ಮಾಡುವ ಪದ್ಧತಿಯಿದೆ.
ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯನ್ನು ‘ಮೌನಿ ಅಮಾವಾಸ್ಯೆ ಅಥವಾ ಅವದಾತ್ರಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ.
ಈ ದಿನ ವಿಷ್ಣು ದೇವನೊಂದಿಗೆ ಅರಳಿ ಮರವನ್ನೂ ಪೂಜಿಸಲಾಗುತ್ತದೆ. ಮೌನಿ ಅಮಾವಾಸ್ಯೆಯ ದಿನದಂದು ದೇವರು ಮತ್ತು ದೇವತೆಗಳು ಗಂಗಾ ನದಿಯ ದಡದಲ್ಲಿ ಮತ್ತು ಸಂಗಮದಲ್ಲಿ ಸ್ನಾನವನ್ನು ಮಾಡುತ್ತಾರೆ. ಮೌನಿ ಅಮಾವಾಸ್ಯೆಯಂದು ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ನಡೆಯುತ್ತದೆ.
ಇದನ್ನು ಅಮೃತ ಸ್ನಾನವೆಂದೂ ಕರೆಯಲಾಗುತ್ತದೆ. ಮೌನಿ ಅಮಾವಾಸ್ಯೆಯ ದಿನ ಗಂಗಾ ಅಥವಾ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ವ್ಯಕ್ತಿ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ. ಪಾಪಗಳು ಪರಿಹಾರವಾಗುತ್ತದೆ. ಕುಟುಂಬದಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ.
ಮೌನಿ ಅಮವಾಸ್ಯೆ ದಿನ ಏನು ಮಾಡಬೇಕು?
ಮುಂಜಾನೆ ಬೇಗನೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಬೇಕು
ಪವಿತ್ರ ಗಂಗಾ ನದಿಯಲ್ಲಿ ಸಾಧ್ಯವಾಗದಿದ್ರೆ ಮನೆಯಲ್ಲೇ ಗಂಗಾಜಲದಿಂದ ಸ್ನಾನ
ಸ್ನಾನದ ಬಳಿಕ ಸೂರ್ಯದೇವನಿಗೆ ಅರ್ಘ್ಯ ನೀಡಬೇಕು, ಆರಾಧನೆ ಮಾಡಬೇಕು
ಪೂರ್ವಜರ ಆತ್ಮಶಾಂತಿಗಾಗಿ ಶ್ರಾದ್ಧ, ತರ್ಪಣ ಹಾಗೂ ಪಿಂಡಪ್ರದಾನ ಕಾರ್ಯ
ಮೌನಿ ಅಮವಾಸ್ಯೆ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು
ಶ್ರೀ ವಿಷ್ಣು, ಲಕ್ಷ್ಮೀ ಮಾತೆ, ತುಳಸಿ ಗಿಡ ಹಾಗೂ ಗಂಗೆಯನ್ನು ಪೂಜಸಿಬೇಕು
ಮೌನವೃತ ಇಲ್ಲವೇ, ಉಪವಾಸ ಮಾಡುವುದರಿಂದ ಪುಣ್ಯ ಲಭಿಸುತ್ತದೆ
ಏನೆಲ್ಲಾ ಮಾಡಬಾರದು?
ಮೌನಿ ಅಮವಾಸ್ಯೆಯ ದಿನ ಉಗುರು, ಗಡ್ಡ ಹಾಗೂ ಕೂದಲನ್ನು ಕತ್ತರಿಸಬಾರದು
ಮದ್ವೆ, ಮುಂಜಿವೆ, ನಿಶ್ಚಿತಾರ್ಥ, ಗೃಹಪ್ರವೇಶ ಮಂಗಳಕರ ಕಾರ್ಯ ಮಾಡಬಾರದು
ಮಾಂಸ, ಮದ್ಯ ಸೇರಿದಂತೆ ತಾಮಸಿಕ ಆಹಾರವನ್ನು ಸೇವನೆ ಮಾಡಬಾರದು
ಈ ದಿನ ಯಾರೊಂದಿಗೂ ವಾದ, ಪ್ರತಿವಾದ ಹಾಗೂ ವಿವಾದ ಮಾಡಿಕೊಳ್ಳಬಾರದು
ಮನೆಯ ಹಿರಿಯರಿಗೆ ಅಪಮಾನ ಹಾಗೂ ಅಪಚಾರ ಆಗದಂತೆ ನೋಡಿಕೊಳ್ಳಬೇಕು
ಮೌನಿ ಅಮವಾಸ್ಯೆಯ ದಿನ ತುಳಸಿ ಗಿಡಕ್ಕೆ ನೀರು ಹಾಕುವುದು ನಿಷೇಧ
ಈ ವರ್ಷ ಎಷ್ಟು ಇದೆ?
ಮೌನಿ ಅಮವಾಸ್ಯೆಯು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲವಾಗಿದೆ. ಮೌನಿ ಅಮವಾಸ್ಯೆ ದಿನದಂದು ಆಕಾಶ ಶಕ್ತಿಗಳು ಸಾಮರಸ್ಯದಿಂದ ಇರುತ್ತವೆ. ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯಗಾಗಿ ಪ್ರಾರ್ಥಿಸಲು ಇದು ಸರಿಯಾದ ಸಮಯವಾಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc