ಬೆಂಗಳೂರು : ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದ ಆರಂಭದಲ್ಲೇ ಭುವನೇಶ್ವರಿ, ಬನಶಂಕರಿ ತಾಯಿ, ಅಣ್ಣಮ್ಮ ದೇವಿಗೆ ನಮಿಸಿದ ಮೋದಿ, ಬೆಂಗಳೂರಿನ ಜನತೆಗೆ ನಮಸ್ಕಾರ ಅಂತ ತಿಳಿಸಿದರು. ಕಳೆದ 10 ವರ್ಷದಲ್ಲಿ ದೇಶ ಅಭಿವೃದ್ಧಿಯ ಪಥದತ್ತ ಸಾಗಿದೆ. ವಿದೇಶಗಳಲ್ಲೂ ಭಾರತಕ್ಕೆ ಒಂದೊಳ್ಳೆ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಗೆ ಕಾರಣವಾಗಿದ್ದೇ ನಾನು, ನನ್ನ ಭಯದಿಂದ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಅಂತ ಲೇವಡಿ ಮಾಡಿದರು. ನಾನು ಸಾಧಾರಣ ಕುಟುಂಬದಿಂದ ಬಂದಿದ್ದೇನೆ. ಬಡವರ ಬವಣೆ ಏನಂಥ ನನಗೆ ಗೊತ್ತಿದೆ.
2014ರ ಹಿಂದೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸಂಕಷ್ಟದಲ್ಲಿತ್ತು, ಆದರೆ ನಾನು ಅಧಿಕಾರ ವಹಿಸಿಕೊಂಡ ನಂತರ ಬದಲಾಗಿದೆ. ಜಿಎಸ್ ಟಿ ಜಾರಿ ಬಳಿಕ ಪರೋಕ್ಷ ತೆರಿಗೆ ಕಡಿಮೆ ಆಗಿದೆ ಅಂತ ತಿಳಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಿಂದ ಕೋಟ್ಯಾಂತರ ಜನರಿಗೆ ಉಪಯೋಗವಾಗಿದೆ. ನಕ್ಷೆ ಪ್ರಕಾರವೇ ಮನೆಗಳು ನಿರ್ಮಾಣವಾಗಬೇಕು. ಉತ್ತಮ ಮತ್ತು ಗುಣಮಟ್ಟ ಮನೆ ನಿರ್ಮಿಸಿ ಬಡವರಿಗೆ ಕೊಡಬೇಕು. ಈ ನಿಟ್ಟಿನಲ್ಲಿ ಎನ್ಡಿಎ ಸರ್ಕಾರ ಕೆಲಸ ಮಾಡಿದೆ.
ಬೆಂಗಳೂರಿನ ನೀರಿನ ಸಮಸ್ಯೆ ಪ್ರಸ್ತಾಪ ಮಾಡಿದ ಮೋದಿ, ಕಾಂಗ್ರೆಸ್ ಈ ನಗರವನ್ನ ಹಾಳು ಮಾಡಿದೆ. ಟ್ಯಾಕ್ಸ್ ಸಿಟಿ ಆಗಿದ್ದ ಬೆಂಗಳೂರನ್ನ ಟ್ಯಾಂಕರ್ ಸಿಟಿಯಾಗಿದೆ. ಬೆಂಗಳೂರು ನಗರವನ್ನ ವಾಟರ್ ಮಾಫಿಯಾ ಸಿಟಿಯನ್ನಾಗಿ ಮಾಡಿದ್ದಾರೆ ಅಂತ ಕಿಡಿಕಾರಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಆಗ್ತಿದೆ. ಭಜನೆ ಮಾಡಿದ್ರೆ ಹಲ್ಲೆ ಮಾಡಲಾಗ್ತಿದೆ. ಬೀದಿಗಳಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿವೆ ಎಂದು ಮೋದಿ ಗುಡುಗಿದರು.