ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾಕಷ್ಟು ಜನರು ಸಾವನ್ನಪ್ಪಿದಂತಹ ಸುದ್ದಿಗಳನ್ನು ಕೇಳಿದ್ದೇವೆ. ಕೂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವುದನ್ನು ಕಾಣಬಹುದು. ಸಣ್ಣ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರನ್ನ ಹಾರ್ಟ್ಅಟ್ಯಾಕ್ ಬಲಿಪಡೆಯುತ್ತಿವೆ. ಇನ್ನು ಒತ್ತಡದ ಜೀವನ ಶೈಲಿ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಈ ಹೃದಯಸ್ತಂಭನಕ್ಕೆ ಕಾರಣವಾಗುತ್ತಿದೆ ಎಂದು ಹೊಸ ಸಂಶೋಧನೆ ಹೇಳುತ್ತದೆ.
ಹೃದಯ ಕಾಯಿಲೆಗೆ ಮುಖ್ಯ ಕಾರಣ ಹಾಗೂ ಹೇಗೆ ತಡೆಗಟ್ಟಬಹುದು
1. ಹೃದಯದ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಪ್ಲೇಕ್ ರಚನೆಯಾದಾಗ ರಕ್ತನಾಳಗಳಲ್ಲಿ ತಡೆ ಉಂಟಾಗುತ್ತದೆ. ಇದರಿಂದ ಹೃದಯ ಸ್ನಾಯುಗಳಿಗೆ ರಕ್ತ ಹರಿಯುವಿಕೆ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸ್ತಂಭನ ಸಂಭವಿಸುತ್ತದೆ.
2. ಅಧಿಕ ರಕ್ತದೊತ್ತಡದಿಂದ ಈ ಸಮಸ್ಯೆ ಕಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಹೃದಯ ಮತ್ತು ರಕ್ತನಾಳಗಳ ಮೇಲೆ ಒತ್ತಡ ಉಂಟು ಮಾಡುತ್ತದೆ. ಇದರಿಂದ ಪಾರ್ಶ್ವವಾಯು ಮತ್ತು ಹೃದಯ ಸ್ತಂಭನ ಸಮಸ್ಯೆ ಉಂಟಾಗುತ್ತೆ.
3. ಮಧುಮೇಹದಿಂದ ಹೃದಯ ರಕ್ತನಾಳಗಳು ಹಾನಿಗೊಳಗಾಗುತ್ತದೆ. ಇದರಿಂದ ಹೃದಯ ಸ್ತಂಭನದ ಅಪಾಯ ಹೆಚ್ಚಾಗುತ್ತೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬೇಕು.
4. ಅಧಿಕ ರಕ್ತದೊತ್ತಡ, ಮಧುಮೇಹ ಹೃದಯಸ್ತಂಭನಕ್ಕೆ ಕಾರಣವಾಗುತ್ತದೆ. ಹಾಗಾಗಿ ಹಣ್ಣುಗಳು, ತರಕಾರಿ, ಧಾನ್ಯಗಳು ಹಾಗೂ ಪ್ರೋಟಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.
5. ಧೂಮಪಾನದಿಂದ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯಸ್ತಂಭನ ಉಂಟಾಗುತ್ತೆ. ಹಾಗಾಗಿ ಧೂಮಪಾನ ತ್ಯಜಿಸಿದಷ್ಟು ಒಳ್ಳೆಯದು.
6. ದೀರ್ಘಕಾಲದವರೆಗೆ ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಎದುರಿಸುತ್ತಿದ್ದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಹೃದಯಸ್ತಂಭನ ಸಂಭವಿಸುತ್ತದೆ. ಒತ್ತಡವನ್ನು ನಿವಾರಿಸುವಂತಹ ತಂತ್ರಗಳನ್ನು ಆಳವಡಿಸಿಕೊಳ್ಳಿ. ಅಗತ್ಯವಿದ್ದರೆ ಮನೋವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.