ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಈ ವರ್ಷ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡು ವರ್ಷಗಳ ನಂತರ ಅವರ ಮನೆಯಲ್ಲಿ ಮಂದಹಾಸ ಮೂಡಲಿದೆ. ಹೀಗಾಗಿ ಅಥಿಯಾ ತಮ್ಮ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.
ರಾಹುಲ್ ಮತ್ತು ಅಥಿಯಾ ನವೆಂಬರ್ 2024ರಲ್ಲಿ ಪ್ರೆಗ್ನೆಂಟ್ ಆಗಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಥಿಯಾ ಶೆಟ್ಟಿ ತಮ್ಮ ಮೊದಲ ಬೇಬಿ ಬಂಪ್ ಅನ್ನು ಪ್ರದರ್ಶಿಸುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಸ್ಕರ್ಟ್ನೊಂದಿಗೆ ಕಪ್ಪು ಬಣ್ಣದ ಟಾಪ್ ಅನ್ನು ಧರಿಸಿರುವ ಅಥಿಯಾ ಬೇಬಿ ಬಂಪ್ ಫೋಟೋದೊಂದಿಗೆ ಸುಂದರವಾಗಿ ಕಾಣುತ್ತಿದ್ದಾರೆ. ತಾಯ್ತನದ ಕಳೆ ಅಥಿಯಾ ಮುಖದಲ್ಲಿ ಎದ್ದು ಕಾಣುತ್ತಿದೆ.
ಅಥಿಯಾ ಪೋಸ್ಟ್ಗೆ ಹಲವರು ನಟರು ಕಾಮೆಂಟ್ ಮಾಡಿದ್ದಾರೆ. ಭೂಮಿ ಪೆಡ್ನಕರ್, ಇಲಿಯಾನಾ ಡಿ ಕ್ರೂಜ್ ಮತ್ತು ಹುಮಾ ಖುರೇಷಿ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ.
ಅಥಿಯಾ ಮತ್ತು ಕೆ ಎಲ್ ರಾಹುಲ್ ಮೊದಲು ಸ್ನೇಹಿತರ ಮೂಲಕ 2019ರಲ್ಲಿ ಪರಿಚಯವಾದರು. ನಂತರ ಪ್ರೀತಿಗೆ ತಿರುಗಿ 2021ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಅಧಿಕೃತಪಡಿಸಿದರು. 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc