ಮಂಗಳವಾರ ಮುಂಬೈನ ಜನಸಂದಣಿ ಬೀದಿಯಲ್ಲಿ ಒಬ್ಬ ವಿಚಿತ್ರವಾದ ವ್ಯಕ್ತಿ ಓಡಾಡುತ್ತಿದ್ದ. ಯಾವುದೋ ಗುಹೆಯಿಂದ ಎದ್ದು ಬಂದವನಂತೆ ಆತನ ವೇಷಭೂಷಣಗಳು ಇದ್ದುವು. ಬೀದಿಯಲ್ಲಿ ಓಡಾಡುವರೆಲ್ಲಾ ಅವರನ್ನು ವಿಚಿತ್ರವಾಗಿಯೇ ನೋಡುತ್ತಿದ್ದರು. ಅವನನ್ನು ನೋಡಿ ಕೊಂಚ ವಿಚಲಿತರು ಕೂಡ ಆಗಿದ್ದರು
ಆರಂಭದಲ್ಲಿ ಆ ವ್ಯಕ್ತಿ ಯಾರು ಎಂದು ಗುರುತಿಸುವಲ್ಲಿ ಎಲ್ಲರೂ ವಿಫಲರಾದರೂ. ವಿಚಿತ್ರ ಮನುಷ್ಯ ಮುಖದ ತುಂಬೆಲ್ಲಾ ಗಂಟು ಕಟ್ಟಿಕೊಂಡಿರುವಂತಹ ಗಡ್ಡ. ತಲೆಯ ತುಂಬಾ ಹರಡಿಕೊಂಡಿರುವ ಒಟರಟೊರಟು ಕೂದಲು. ಇವೆಲ್ಲವನ್ನು ನೋಡಿ. ಇವರು ಯಾರೂ ಹಿಮಾಲಯದಿಂದಲೋ, ಇಲ್ಲವೇ ಯಾವುದಾದ್ರೂ ಕಾಡಿನಲ್ಲಿಯೋ, ಗುಹೆಯಲ್ಲಿಯೋ ಬಹಳಷ್ಟು ವರ್ಷ ವಾಸ ಮಾಡಿ ಈಗ ನಗರಕ್ಕೆ ಬಂದಿರಬಹುದು ಎಂದುಕೊಂಡಿದ್ದರು. ಆದ್ರೆ ತೆರೆ ಹಿಂದಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆದಾಗಲೇ ಇಡಿ ಸಿನಿಮಾ ಅಭಿಮಾನಿಗಳ ಜಗತ್ತು ಬೆಚ್ಚಿ ಬಿದ್ದಿತ್ತು. ಹಾಗೆ ತಲೆ ಕೂದಲು ಬಿಟ್ಟುಕೊಂಡು, ಕೆಟ್ಟದಾಗಿ ಗಡ್ಡವಿಟ್ಟುಕೊಂಡು ಮೈಮೇಲೆ ವಿಚಿತ್ರ ಉಡುಗೆಯನ್ನುಟ್ಟುಕೊಂಡು ಮುಂಬೈ ಬೀದಿ ಬೀದಿಯಲ್ಲಿ ಅಲೆದಾಡಿದ್ದು ಯಾರು ಅಲ್ಲ, ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್, ಸೂಪರ್ಸ್ಟಾರ್ ಆಮಿರ್ ಖಾನ್.
ಬಿಟಿಎಸ್ ಪಿಕ್ಚರ್ ತನ್ನ ಎಕ್ಸ್ ಖಾತೆಯಲ್ಲಿ ಈ ಒಂದು ವಿಚಾರವನ್ನು ಹಂಚಿಕೊಂಡಿದೆ. ಆಮಿರ್ ಖಾನ್ ಮೇಕ್ಅಪ್ ಮಾಡಿಕೊಳ್ಳುತ್ತಿರುವುದು ಅವರನ್ನು ಸಂಪೂರ್ಣವಾಗಿ ಗುಹೆಯಲ್ಲಿರುವ ಮನುಷ್ಯನಂತೆ ರೆಡಿ ಮಾಡುತ್ತಿರುವುದು ಇವೆಲ್ಲಾ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇದನ್ನು ಕಂಡ ಅಭಿಮಾನಿಗಳು ಫನ್ನಿಯಾದ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇನ್ನೂ ಕೆಲವರು ಆಮಿರ್ ಖಾನ್ ಅವರನ್ನು ಟೀಕೆ ಮಾಡಿದ್ದಾರೆ. ‘ಸಿನಿಮಾ ಅಂತೂ ನಡೆಯುತ್ತಿಲ್ಲ. ಈ ರೀತಿಯಾಗಿ ದುಡ್ಡು ಮಾಡುವ ಕೆಲಸ ಆಗಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಕಾನ್ಸೆಪ್ಟ್ನ ಇಷ್ಟಪಟ್ಟಿದ್ದು, ಬ್ರ್ಯಾಂಡ್ಗೆ ಭರ್ಜರಿ ಪ್ರಚಾರ ಸಿಕ್ಕಿದೆ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಸೋಲಿನ ಬಳಿಕ ಆಮಿರ್ ಖಾನ್ ಅವರು ಸೈಲೆಂಟ್ ಆದರು. ನಟನೆಯಿಂದ ಒಂದು ಬ್ರೇಕ್ ಪಡೆದರು. ಈಗ ಅವರ ಸಂಪೂರ್ಣ ಗಮನ ‘ಸಿತಾರೆ ಜಮೀನ್ಪರ್’ ಸಿನಿಮಾ ಮೇಲೆ ಇದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc