ಸ್ಯಾಂಡಲ್ವುಡ್ನ ಡೈರೆಕ್ಟರ್ ಆರ್. ಚಂದ್ರು ಉತ್ತರ ಭಾರತದಲ್ಲಿಯೇ ಇದ್ದಾರೆ. ಎಲ್ಲರಂತೆ ಇವರೂ ಉತ್ತರ ಭಾರತದ ಪ್ರಯಾಗ್ ರಾಜ್ಗೆ ಹೋಗಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಅದಕ್ಕೂ ಮೊದಲು ಸುತ್ತ-ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ಕಂಡಿದ್ದಾರೆ.
ಪ್ರಯಾಗ್ ರಾಜ್ ಹೋಗೋ ಮೊದಲು, ಅಯೋಧ್ಯೆಯ ರಾಮನ ದರ್ಶನ ಪಡೆದಿದ್ದಾರೆ. ತಾವು ಮತ್ತು ತಮ್ಮ ಸ್ನೇಹಿತರ ತಂಡದೊಂದಿಗೆ ಬಾಲ ರಾಮನ ದರ್ಶನ ಪಡೆದಿದ್ದಾರೆ. ಅಲ್ಲಿಂದ ತ್ರಿವೇಣಿ ಸಂಗಮಕ್ಕೂ ಬಂದಿದ್ದಾರೆ. ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಪ್ರಯಾಗ್ ರಾಜ್ ಕುಂಭಮೇಳದ ಅದ್ಭುತ ಕ್ಷಣವನ್ನ ಕಣ್ತುಂಬಿಕೊಂಡಿದ್ದಾರೆ. ಹಾಗೇನೆ ಇಲ್ಲಿ ಪ್ರತಿಯೊಂದನ್ನು ಅಷ್ಟೆ ಕುತೂಹಲದಿಂದಲೂ ನೋಡಿದ್ದಾರೆ. ಆಯಾ ಜಾಗದಲ್ಲಿ ಫೋಟೋಗಳನ್ನ, ವಿಡಿಯೋಗಳನ್ನ ಮಾಡಿಕೊಂಡು ಖುಷಿಪಟ್ಟಿದ್ದಾರೆ. ಅವುಗಳನ್ನ ಸೋಷಿಯಲ್ ಮೀಡಿಯಾ ತಮ್ಮ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ.
ಡೈರೆಕ್ಟರ್ ಆರ್.ಚಂದ್ರು ಅಯೋಧ್ಯೆಯಲ್ಲಿ ಇಡೀ ದಿನ ಸಮಯ ಕಳೆದಿದ್ದಾರೆ. ಇಲ್ಲಿಯ ಪ್ರತಿಯೊಂದು ವಿಷಯವನ್ನು ಗಮನಿಸಿದ್ದಾರೆ. ಸಂಜೆಯ ಹೊತ್ತಿಗೆ ಇಲ್ಲಿ ನಡೆಯೋ ಕಾರ್ಯಕ್ರಮದಲ್ಲೂ ಭಾಗಿ ಆಗಿದ್ದಾರೆ. ಹಾಗೆ ಇಲ್ಲಿಯ ಪವಿತ್ರ ನದಿ ಸರಯೂ ತೀರದಲ್ಲಿ ಆರತಿ ಮಾಡಿ ಖುಷಿಪಟ್ಟಿದ್ದಾರೆ.ಮಹಾ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಖುಷಿನೇ ಬೇರೆ ಇದೆ. ಗಂಗಾ, ಯಮುನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಪುಣ್ಯವೇ ಬೇರೆ ಇದೆ. ನಿಜಕ್ಕೂ ಇದು ಬದುಕು ಸಾರ್ಥಕಗೊಳಿಸಿದ ಕ್ಷಣ ಅಂತಲೂ ಬರೆದುಕೊಂಡಿದ್ದಾರೆ.
ಆದರೆ, ಡೈರೆಕ್ಟರ್ ಆರ್.ಚಂದ್ರು ಉತ್ತರ ಭಾರತಕ್ಕೆ ಮಹಾ ಕುಂಭಮೇಳಕ್ಕಾಗಿಯೇ ಬಂದವರಲ್ಲ. ಸಿನಿಮಾದ ಶೂಟಿಂಗ್ಗಾಗಿಯೇ ಲೋಕೇಷನ್ ಹುಡುಕೊಂಡು ಬಂದಿದ್ದಾರೆ. ಹಾಗೆ ಬಂದ ಸಮಯದಲ್ಲಿಯೇ ಇಲ್ಲಿ ಕುಂಭಮೇಳವು ಶುರು ಆಗಿದೆ. ಹಾಗೆ ಬಂದ್ಮೇಲೆ ಬಿಡಲು ಸಾಧ್ಯವೇ? ಅದಕ್ಕೇನೆ ಪ್ರಯಾಗ್ ರಾಜ್ಗೆ ಬಂದು ಕುಂಭಮೇಳವನ್ನು ಕಣ್ತುಂಬಿಕೊಂಡಿದ್ದಾರೆ.
ಮೊದಲು ಅಯೋಧ್ಯೆಗೆ ಹೋಗಿದ್ದೇವು. ಅಲ್ಲಿಂದ ಪ್ರಯಾಗ್ ರಾಜ್ಗೆ ಬಂದವು. ಅಲ್ಲಿ ಕುಂಭಮೇಳವನ್ನ ಕಣ್ತುಂಬಿಕೊಂಡೆವು. ಆ ಮೇಲೆ ಕಾಶಿಗೆ ಬಂದವು ಅಂತಲೆ ಆರ್.ಚಂದ್ರು ಬರೆದುಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಈ ಎಲ್ಲ ಪಯಣದ ಫೋಟೋ ಹಾಗೂ ಅನುಭವವನ್ನ ಬರೆದುಕೊಂಡು ಖುಷಿಪಟ್ಟಿದ್ದಾರೆ ಅಂತಲೇ ಹೇಳಬಹುದು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc