ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರಿಮಣಿ ಸೀರಿಯಲ್ ನಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಅದುವೇ ಕರ್ಣ ಸಾಹಿತ್ಯರ ಲವ್ ಸ್ಟೋರಿ. ಆದರೆ ಈಗ ಕರುಣಾಸಾಹಿತ್ಯನ ಪ್ರೇಮ ಕಥೆಯಲ್ಲಿ ಒಂದು ಮೆಗಾ ಟ್ವಿಸ್ಟ್ ಬಂದಿದೆ.
ಈ ಟ್ವಿಸ್ಟ್ ನಲ್ಲಿ ಕರ್ಣ ತನ್ನ ಅತ್ತೆ ಮಗಳು ಸಿಂಚನ ಮದುವೆಯಾಗ್ತಾ ಇದ್ರೆ, ಸಾಹಿತ್ಯ ತನ್ನ ಚಿಕ್ಕಪ್ಪ ತೋರಿಸಿದ ಹುಡುಗನನ್ನ ಮದುವೆಯಾಗೋದಕ್ಕೆ ರೆಡಿಯಾಗಿದ್ದಾಳೆ. ಆದರೆ ಇವರಿಬ್ಬರ ನಡುವೆ ಪ್ರೀತಿ ಇರೋದು ನಿಜ ಈ ಪ್ರೀತಿಯಿಂದಾಗಿ ಇಬ್ಬರ ನಡುವೆ ಒಂದು ರೀತಿಯ ವಿರಹ ವೇದನೆ. ಈ ವಿರಹವನ್ನ ಹೇಳುವಂತಹ ಸ್ಪೆಷಲ್ ಸಾಂಗ್ ಅನ್ನು ರೆಡಿಯಾಗಿದೆ.
ಕರ್ಣ ಹಾಗೂ ಸಾಹಿತ್ಯ ನಡುವಿನ ಪ್ರೀತಿ ವಿರಹ ವೇದನೆಯನ್ನು ಬಣ್ಣಿಸುವಂತಹ, ಸ್ಪೆಷಲ್ ಸಾಂಗ್ ಅನ್ನು ಕಲರ್ಸ್ ಕನ್ನಡ ವಾಹಿನಿಯು ರೆಡಿ ಮಾಡಿದೆ. ಕಡಲ ತೀರದಲ್ಲಿ ಶೂಟ್ ಆಗಿರುವ, ಈ ಬ್ಯೂಟಿಫುಲ್ ಹಾಡು ಸಕ್ಕತ್ ರಿಚ್ ಆಗಿ ಮೂಡಿ ಬಂದಿದೆ.
ಸದ್ಯ ಸೀರಿಯಲ್ನ ನೋಡ್ತಾ ಇರುವಂತಹ ಪ್ರೇಕ್ಷಕರಿಗೆ ಇಬ್ಬರೂ ಮತ್ತೆ ಒಂದಾಗಲಿ, ಅವರ ಲವ್ ಸ್ಟೋರಿ ಪಾಸಾಗ್ಲಿ.. ಇಬ್ಬರೂ ಮದುವೆಯಾಗಲಿ ಅಂತಿದೆ. ಸಾಹಿತ್ಯ ಕಾರ್ಣನ ಮನದಾಸೆ ಕೂಡ ಇದೆ ಆಗಿದೆ. ಆದರೆ ಇಬ್ಬರು ನಡುವೆ ಮತ್ತೆ ಪ್ರೀತಿ ಆಗುತ್ತಾ? ಇಬ್ಬರೂ ಆಗಲು ಹೊರಟಿರೋ ಮದುವೆ, ಮುರಿದು ಬೀಳುತ್ತಾ? ಮುಂದೆ ಏನಾಗುತ್ತೆ? ತಿಳ್ಕೊಬೇಕು ಅಂದ್ರೆ ಕರಿಮಣಿ ಸೀರಿಯಲ್ ನ ಮಿಸ್ ಮಾಡ್ದೆ ನೋಡಿ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc