ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಹಶಿಲ್ದಾರ ಕಛೇರಿಯ ಭೂ ಮಾಪನ ಇಲಾಖೆಯು ಭ್ರಷ್ಟಾಚಾರದ ಆರೋಪಗಳಿಂದ ಗಾಬರಿಗೊಂಡಿದೆ. ಸರ್ಕಾರಿ ರೂಪಾಯಿ 30-50 ಫೀಸ್ ಇದ್ದರೂ, ಸಿಬ್ಬಂದಿ ಸಾವಿರಾರು ರೂಪಾಯಿ ಲಂಚವನ್ನು ಬಲವಂತವಾಗಿ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಹೊರಹೊಮ್ಮಿವೆ. ಭೂಮಿಯ ಅಳತೆ, ನಕಾಶೆ ಪಡೆಯಲು ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ನಾಗರಿಕನಿಗೂ ಸಿಬ್ಬಂದಿ ಸಾವಿರದಿಂದ 1,500 ರೂಪಾಯಿ ವರೆಗೆ ಹಣವನ್ನು ಬೇಡುತ್ತಿದ್ದಾರೆ. ಹಣ ನೀಡದಿದ್ದರೆ ಕೆಲಸ ಮಾಡಿಕೊಡುವುದಿಲ್ಲ ಎಂಬ ಬೆದರಿಕೆ ಇದೆ.
ಸಿಬ್ಬಂದಿಗಳಾದ ಮಲ್ಲಿಕ್ ಮಕಾಂದಾರ್, ಮುಸ್ತಾಕ್ ಮತ್ತು ರಫೀಕ್ ಅವರು ಪೋನ್ ಪೇ ಮೂಲಕ ಸಹ ಲಂಚವನ್ನು ಪಡೆದುಕೊಳ್ಳುತ್ತಿದ್ದಾರೆಂದು ಆರೋಪ. ಈ ವರ್ತನೆಗೆ ಬೇಸತ್ತು ಕೆಲವು ಅರ್ಜಿದಾರರು ರಹಸ್ಯವಾಗಿ ವೀಡಿಯೊ ರೆಕಾರ್ಡ್ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. “30 ರೂಪಾಯಿ ಫಾರ್ಮ್ ತುಂಬಲು ಬಂದವರಿಗೆ 1,500 ರೂಪಾಯಿ ಕೇಳುತ್ತಾರೆ. ನಾವು ಹೇಳಿಕೊಂಡರೆ, ‘ನಿಮ್ಮ ಕೆಲಸ ಮಾಡಿಸಿಕೊಳ್ಳೋಕೆ ಹಣ ಕೊಡಿ‘ ಅಂತ ಹೇಳುತ್ತಾರೆ” ಎಂದು ಒಬ್ಬ ಪೀಡಿತ ನಾಗರಿಕರು ತಿಳಿಸಿದ್ದಾರೆ.
ಈ ಘಟನೆ ಸರ್ಕಾರಿ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರದ ಗಂಭೀರತೆಯನ್ನು ತೋರಿಸುತ್ತದೆ. ಪ್ರಜೆಗಳು ಭಯದಿಂದ ಮೌನವಾಗಿದ್ದರೆ, ಸಿಬ್ಬಂದಿ ನಿರಂಕುಶವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ತ್ವರಿತ ನ್ಯಾಯಿಕ ಮತ್ತು ಆಡಳಿತಾತ್ಮಕ ಕ್ರಮ ಅಗತ್ಯವಿದೆ. ಲಂಚವಿರೋಧಿ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ತಕರಾರು ದಾಖಲಿಸಿ ತನಿಖೆ ನಡೆಸಬೇಕು. ಸರ್ಕಾರವು ಈ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಂಡರೆ ಮಾತ್ರ ಸಾಮಾನ್ಯರ ನಂಬಿಕೆ ಮರಳಬಹುದು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc