ನಡುಬೀದಿಯಲ್ಲಿ ಪಾಪಿಯೊಬ್ಬ ತನ್ನ ಚಿಕ್ಕಪ್ಪನ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಇಂತಹ ಅಮಾನವೀಯ ಕೃತ್ಯ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಚಂದಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ವಿವಾದದ ಕಾರಣಕ್ಕೆ ಚಿಕ್ಕಪ್ಪನಿಗೆ ಬೆಂಕಿ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.
ಚಿನ್ನವನ್ (55) ದಾಳಿಗೆ ಒಳಗಾದ ವ್ಯಕ್ತಿ. ಸೆಂಥಿಲ್(26) ಚಿಕ್ಕಪ್ಪನಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಪಾಪಿ. ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಜಮೀನು ವಿವಾದ ನಡೆಯುತ್ತಿತ್ತು. ಸೆಂಥಿಲ್ ಜಮೀನಿಗೆ ಚಿನ್ನವನ್ ಅವರ ಜಮೀನಿನ ಮೂಲಕವೇ ಓಡಾಡಬೇಕಿತ್ತು. ತನ್ನ ಜಮೀನಿನಲ್ಲಿ ಓಡಾಡಬಾರದೆಂದು ಚಿನ್ನವನ್ ಕುಟುಂಬ ಅಡ್ಡಿ ಪಡಿಸಿತ್ತು.
ಕಳೆದ ನವೆಂಬರ್ ತಿಂಗಳಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಸೆಂಥಿಲ್ ಕುಟುಂಬ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ರು. ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಸಿಗದೆ ಚಿನ್ನವನ್ ಕುಟುಂಬ ಪರಾರಿಯಾಗಿತ್ತು. ನಿನ್ನೆ ಕಾವೇರಿಪಟ್ಟಣಂನ ಅಂಗಡಿ ಸಮೀಪ ಚಿನ್ನವನ್ ಎದುರಾಗಿದ್ದ . ಈ ವೇಳೆ ವಾಟರ್ ಬಾಟಲ್ನಲ್ಲಿ ತಂದಿದ್ದ ಪೆಟ್ರೋಲ್ ನ್ನು ನಡುರಸ್ತೆಯಲ್ಲಿ ಚಿನ್ನವನ್ನ ಮೇಲೆ ಎರಚಿ ಸೆಂಥಿಲ್ ಬೆಂಕಿ ಇಟ್ಟಿದ್ದಾನೆ.