ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ. ಸುನೀಲ್ ಕಿಡ್ನಾಪ್ ಕೇಸ್ಗೆ ಒಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೆಸ್ ಮುಖಂಡರೊಬ್ಬರನ್ನು ಪೊಲೀಸರು ಆರೆಸ್ಟ್ ಮಾಡಲಾಗಿದೆ.
ಜನವರಿ 25 ರಂದು ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಅವರು ವಾಕಿಂಗ್ ಮಾಡುವಾಗ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದರು. ಈ ಅಪಹರಣ ಮಾಡಿರುವ ಹಿಂದೆ ಕಿಂಗ್ ಪಿನ್ ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಎನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇನ್ನು ಇವರು ಬಳ್ಳಾರಿ ನಗರಸಭೆಯ ಮಾಜಿ ಉಪಾಧ್ಯಕ್ಷರ ಮಗನಾಗಿದ್ದಾನೆ.
ಹಣದಾಸೆಗೆ ಸಂಚು ರೂಪಿಸಿ ತನಗೆ ಪರಿಚಿತವಾದ ವ್ಯಕ್ತಿಗಳಿಂದ ಡಾ.ಸುನೀಲ್ ಅವರನ್ನು ಕಿಡ್ನಾಪ್ ಮಾಡಿಸಿದ್ದನು. ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಅತ್ಯಾಪ್ತ ಆಗಿದ್ದ ವಿಜಯ್ ಕುಮಾರ್ ಪ್ರಕರಣ ನಡೆದ ಮೇಲೆ ಬಚಾವ್ ಮಾಡೋದಕ್ಕೆ ಪ್ಲಾನ್ ನಡೆಯುತ್ತಿತ್ತಂತೆ. ಹೀಗಾಗಿ ಕಾಂಗ್ರೆಸ್ನ ಪ್ರಭಾವಿ ನಾಯಕರ ಮನೆಯಲ್ಲೇ ಆಶ್ರಯ ಪಡೆದಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಪಕ್ಷದ ಮುಖಂಡ ಎನ್ನವ ಕಾರಣಕ್ಕೆ ಆರೋಪಿ ರಕ್ಷಣೆಗೆ ಕಾಂಗ್ರೆಸ್ ಪ್ರಭಾವಿಗಳು ಮುಂದಾಗಿದ್ದರು ಎನ್ನಲಾಗಿದೆ.
ಹೀಗಾಗಿಯೇ ಪ್ರಭಾವಿಗಳ ಮನೆಯಲ್ಲಿ ಅಡಗಿಕೊಂಡಿದ್ದರಿಂದ ಆರೋಪಿಯಾದ ವಿಜಯ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಒಟ್ಟು 7 ಆರೋಪಿಗಳು ಬಂಧನವಾದ ಬಳಿಕ ಎ1 ಆರೋಪಿ ವಿಜಯ್ನನ್ನ ಅರೆಸ್ಟ್ ಮಾಡಲಾಗಿದೆ. ಕಿಡ್ನಾಪ್ ಮಾಡಿದ 4 ದಿನಗಳ ನಂತರ ಪೊಲೀಸರ ಕೈಗೆ ತಗಲಾಕಿಕೊಂಡಿದ್ದನು. ಸದ್ಯ ಆರೋಪಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc