ಸ್ಯಾಂಡಲ್ವುಡ್ಗೆ ಅದ್ದೂರಿ ಎಂಟ್ರಿ ಕೊಟ್ಟಿರುವ ಮತ್ತೊಬ್ಬ ಆರಡಿ ಕಟೌಟ್ ಸಂಚಿತ್ ಸಂಜೀವ್ ಗೆ ಇಂದು ಹಟ್ಟುಹಬ್ಬದ ಸಂಭ್ರಮ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿಗೆ ಅಭಿಮಾನಿಗಳು ಸ್ನೇಹಿತರು ಹಾಗೂ ಕುಟುಂಭದವರು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಸಂಚಿ ಚೊಚ್ಚಲ ಸಿನಿಮಾದ ಪ್ರೋಮೋ ರಿಲೀಸ್ ಮಾಡುವ ಮೂಲಕ ಬರ್ತಡೇ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ ಸಿನಿಮಾತಂಡ.
ಇತ್ತೀಚಿಗಷ್ಟೆ ಚೊಚ್ಚಲ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ಆದರೆ ಈಗ ಹುಟ್ಟುಹಬ್ಬದ ಪ್ರಯುಕ್ತ ಪ್ರೋಮೋ ರಿಲೀಸ್ ಮಾಡುವ ಜೊತೆಗೆ ಟೈಟಲ್ ಕೂಡ ಅನಾವರಣ ಮಾಡಲಾಗಿದೆ. ಸಂಚಿ ಚೊಚ್ಚಲ ಸಿನಿಮಾಗೆ ‘ಮ್ಯಾಂಗೋ ಪಚ್ಚ’ ಎಂದು ಟೈಟಲ್ ಇಡಲಾಗಿದೆ.
ಕ್ರೇಜಿ ಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್ ಗೆ ಎಂಟ್ರಿ ಕೊಡುವ ಫಾರಿನ್ ಲೇಡಿಗೆ ಡಿವಿಡಿ ಅಂಗಡಿ ಮಾಲಿಕನ ಬಗ್ಗೆ ಕಥೆ ಹೇಳುವ ಮೂಲಕಪ್ರೋಮೋ ಪ್ರಾರಂಭವಾಗಲಿದೆ. ಖಾಲಿ ಇರುವ ಟೇಬಲ್ ಯಾರದ್ದು ಎಂದು ಕೇಳುವ ಫಾರಿನ್ ಲೇಡಿಗೆ ಮ್ಯಾಂಗೋ ಪಚ್ಚನ ಕಥೆ ಹೇಳುವ ಮೂಲಕ ಸಂಚಿತ್ ಖಡಕ್ ಲುಕ್ ರಿವೀಲ್ ಆಗಲಿದೆ. ಧಮ್ ಎಳೆಯುವ ಸಂಚಿ ರಗಡ್ ಗೆಟಪ್ ಸಿನಿ ಅಭಿಮಾನಿಗಳ ನಿದ್ದೆ ಗೆಡಿಸುವಂತಿದೆ.
ಸಂಚಿಗೆ ನಾಯಕಿಯಾಗಿ ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಂಚಿ ಮೊದಲ ಸಿನಿಮಾಗೆ ವಿವೇಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿವೇಕ ಅವರಿಗೂ ಇದು ಮೊದಲ ಸಿನಿಮಾ. ಸುದೀಪ್ ಅಕ್ಕನ ಮಗನ ಚೊಚ್ಚಲ ಚಿತ್ರಕ್ಕೆ ಕೆಆರ್ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ.
ಇದು ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್ ಸಿನಿಮಾ. 2001 ರಿಂದ 2011ರ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ.
ಈ ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಚಿತ್ರಕ್ಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc