ಐದು ವರ್ಷಗಳ ಹಿಂದೆ ಕೋವಿಡ್ ಕಾರಣ ಲಾಕ್ಡೌನ್ ಆಗಿದ್ದ ಸಮಯದಲ್ಲಿ ಪೌರಾಣಿಕ ಸೀರಿಯಲ್ಗಳನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಭಾರತದ ಮಹಾಕಾವ್ಯ ‘ಮಹಾಭಾರತ’ ಕೂಡ ಒಂದು. ಲಾಕ್ಡೌನ್ ಸಮಯದಲ್ಲಿ ಈ ಪೌರಾಣಿಕ ಧಾರಾವಾಹಿಗಳಿಗೆ ಹೆಚ್ಚು ಬೇಡಿಕೆ ಬಂದಿತ್ತು. ಇದನ್ನು ಮನದಲ್ಲಿಟ್ಟುಕೊಂಡು ಮತ್ತೆ ಸ್ಟಾರ್ ಸುವರ್ಣ ಪೌರಾಣಿಕ ಧಾರವಾಹಿ ‘ಮಹಾಭಾರತ’ವನ್ನು ಮತ್ತೆ ಟೆಲಿಕಾಸ್ಟ್ ಮಾಡುವ ಪ್ಲಾನ್ ಮಾಡಿದೆ.
![](https://www.guaranteenews.com/wp-content/uploads/2025/02/Untitled-design-26-1024x576.jpg)
2013ರಲ್ಲಿ ಸ್ಟಾರ್ ಪ್ಲಸ್ನಲ್ಲಿ ಈ ‘ಮಹಾಭಾರತ’ ಸೀರಿಯಲ್ ಪ್ರಸಾರ ಕಂಡಿತ್ತು. ಆ ವೇಳೆ ಕನ್ನಡದಲ್ಲಿ ಡಬ್ಬಿಂಗ್ಗೆ ಅವಕಾಶವಿರಲಿಲ್ಲ. ಹಾಗಾಗಿ ಈ ಮಹಾಭಾರತ ಕನ್ನಡಕ್ಕೆ ಡಬ್ ಆಗಿರಲಿಲ್ಲ. ಆದರೆ, ಉಳಿದ ಎಲ್ಲಾ ಭಾಷೆಗಳಿಗೂ ಡಬ್ ಆಗಿತ್ತು. 2020ರಲ್ಲಿ ಕೋವಿಡ್ ಸಂದರ್ಭದಲ್ಲಿ,ಶೂಟಿಂಗ್ಗಳೆಲ್ಲ ನಿಂತು ಹೋಯ್ತು. ಲಾಕ್ಡೌನ್ ಮಾಡಲಾಗಿತ್ತು. ಶೋಗಳು ಪ್ರಸಾರ ಆಗಲೇ ಬೇಕಿತ್ತು. ಆ ಟೈಮ್ ನಲ್ಲಿ ಒಂದಷ್ಟು ಶೋಗಳನ್ನು ಮರು ಪ್ರಸಾರ ಮಾಡಲಾಗುತ್ತಿತ್ತು. ಅದರಲ್ಲಿ ಈ ‘ಮಹಾಭಾರತ’ ಕೂಡ ಒಂದು.
![](https://www.guaranteenews.com/wp-content/uploads/2025/02/Untitled-design-27-1024x576.jpg)
ಕೋವಿಡ್ನಿಂದ ಕಂಗಾಲಾಗಿದ್ದ ಜನರಿಗೆ ಮನರಂಜನೆಗೆ ಇನ್ನೂ ಏನಾದರೂ ಕೊಡಬೇಕು ಅನ್ನುವ ದೃಷ್ಟಿಯಿಂದ ಕನ್ನಡಕ್ಕೆ ಪೌರಾಣಿಕ ಶೋ ಅನ್ನು ಡಬ್ ಮಾಡಲಾಗಿತ್ತು. ಲಾಕ್ಡೌನ್ನಲ್ಲಿ ಬಹಳಷ್ಟು ಮಂದಿಯಯಿಂದ ಮನ್ನಣೆ ಗಳಿಸಿತ್ತು. ಆ ವೇಳೆ ಸ್ಟಾರ್ ಸುವರ್ಣಗೆ ರೇಟಿಂಗ್ ವಿಷಯದಲ್ಲೂ ತುಂಬಾನೇ ಯಶಸ್ಸು ತಂದುಕೊಟ್ಟಿತ್ತು. ಲಾಕ್ಡೌನ್ನಲ್ಲಿ ‘ಮಹಾಭಾರತ’ ಸ್ಟಾರ್ ಸುವರ್ಣದಲ್ಲಿ ಅತೀ ಹೆಚ್ಚು ಟಿಆರ್ಪಿ ಪಡೆದುಕೊಂಡು ಸೀರಿಯಲ್ ಆಗಿತ್ತು.
ಸ್ಟಾರ್ ಸುವರ್ಣ ವಾಹಿನಿ ಲಾಕ್ಡೌನ್ನಲ್ಲಿ ಮಹಾಭಾರತ, ರಾಧಾ ಕೃಷ್ಣ, ಸೀತೆಯ ರಾಮ, ಇಂತಹ ಪೌರಾಣಿಕ ಶೋಗಳನ್ನು ಪ್ರಸಾರ ಮಾಡಿತ್ತು. ಈ ಎಲ್ಲಾ ಶೋಗಳು ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ, ಉತ್ಸಾಹ ಕೊಡುವ ಶೋಗಳು ಆಗಿತ್ತು. ಅಂದು ಸಿಕ್ಕಿದ ಯಶಸ್ಸನ್ನು, ಜನರ ಅಭಿರುಚಿಯನ್ನು ಮನಗಂಡು ಮತ್ತೆ ‘ಮಹಾಭಾರತ’ದ ಕನ್ನಡ ವರ್ಷನ್ ಅನ್ನು ಕಿರುತೆರೆಯಲ್ಲಿ ಮತ್ತೆ ಪ್ರಸಾರ ಮಾಡುವುದಕ್ಕೆ ಸ್ಟಾರ್ ಸುವರ್ಣ ಮುಂದಾಗಿದ್ದಾರೆ.
ಬರುವ ಸೋಮವಾರ ಫೆ. 10ರಿಂದ ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ 11.30ರ ವರೆಗೆ 1 ಗಂಟೆ 30 ನಿಮಿಷಗಳ, ಮಹಾಭಾರತ ಮೆಗಾ ಎಪಿಸೋಡ್ ಗಳು ಪ್ರತಿದಿನ ಪ್ರಸಾರವಾಗಲಿದೆ. ಈಗಾಗಲೇ ಎಡೆಯೂರು ಸಿದ್ದಲಿಂಗೇಶ್ವರ, ದೇವಿಮಹಾತ್ಮೆ, ರೇಣುಕಾ ಎಲ್ಲಮ್ಮದಂತಹ ಪೌರಾಣಿಕ ಸೀರಿಯಲ್ ಟೆಲಿಕಾಸ್ಟ್ ಮಾಡಿ, ಜನರ ಮನಮುಟ್ಟಿರೋ ಸ್ಟಾರ್ ಸುವರ್ಣ ವಾಹಿನಿ ಈಗ ಮಹಾಭಾರತವನ್ನು ಮರುಪ್ರಸಾರ ಮಾಡ್ತಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc