ಬೆಂಗಳೂರಿನ ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಸಮೀಪ ಫೆಬ್ರವರಿ 2ರ ಮಧ್ಯರಾತ್ರಿ ಗೂಡ್ಸ್ ಆಟೋ ಚಾಲಕರ ಮೇಲೆ ನಡೆದ ಹಲ್ಲೆ ಮತ್ತು ಸುಲಿಗೆ ಘಟನೆ ಆಘಾಕಾರಿ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದಿಂದ ಗೂಡ್ಸ್ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು, ರಾತ್ರಿ 1 ಗಂಟೆ ಸುಮಾರಿಗೆ ಚಾಲಕ ಸೋಮನಾಥ್ ಅವರ ಆಟೋಗೆ ಅಡ್ಡಹಾಕಿ, “ನೀವು ಆಕ್ಸಿಡೆಂಟ್ ಮಾಡಿದ್ದೀರಿ, ಹಣ ಕೊಡಿ” ಎಂದು ಬೆದರಿಸಿ ಮೊಬೈಲ್ ಫೋನ್ ಕಿತ್ತುಕೊಂಡರು. ನಂತರ, ಚಾಲಕರನ್ನು ಆಟೋದಲ್ಲೇ ಕಿಡ್ನಾಪ್ ಮಾಡಿ, ಅವರ ಕುಟುಂಬಕ್ಕೆ ಕರೆ ಮಾಡಿಸಿ ₹4,000 ಫೋನ್ ಪೇ ಮೂಲಕ ಸುಲಿದರು ಎಂದು ಪೊಲೀಸರು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ .
ಹೈಗ್ರೌಂಡ್ಸ್ ಪೊಲೀಸರು ಘಟನೆಯ ನಂತರ ತುರ್ತು ಕ್ರಮ ಕೈಗೊಂಡು, ಓರ್ವ ಬಾಲಕ ಸೇರಿದಂತೆ ಇಬ್ಬರು ಸಂಶಯಿತರನ್ನು ಬಂಧನೆ ಮಾಡಿದ್ದಾರೆ. ಆರೋಪಿಗಳು ಚಾಲಕರನ್ನು ಬಲವಂತವಾಗಿ ಹಿಡಿದಿಟ್ಟು, ಹಣವನ್ನು ಡಿಜಿಟಲ್ ವರ್ಗಾವಣೆ ಮಾಡಿಸಿಕೊಂಡ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಪೊಲೀಸ್ ಕಮಿಷನರ್ ಆರ್. ಹಿತೇಶ್ ಅವರು, “ನಗರದಲ್ಲಿ ಇಂತಹ ಅಪರಾಧಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಸಿಬ್ಬಂದಿ ಸಜ್ಜಾಗಿದೆ” ಎಂದು ಹೇಳಿದ್ದಾರೆ .
ನಗರದ ಸುರಕ್ಷತೆ ಮತ್ತೆ ಪ್ರಶ್ನಾರ್ಹ
ಈ ಘಟನೆಯು ಬೆಂಗಳೂರಿನ ರಾತ್ರಿ ಸಂಚಾರದ ಸುರಕ್ಷತೆ ಕುರಿತು ಮತ್ತೆ ಚರ್ಚೆಗಳನ್ನು ಪ್ರಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರ ಮೇಲೆ ಹಲ್ಲೆ, ಮಹಿಳೆಯರ ಕಿರುಕುಳ , ಮತ್ತು ಕಿಡ್ನ್ಯಾಪಿಂಗ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಪೊಲೀಸ್ ಠಾಣೆಗಳು ಸಿಬ್ಬಂದಿ ಸಾಕಷ್ಟಿಲ್ಲದೆ ಹೋರಾಡುತ್ತಿರುವುದು ಸಾರ್ವಜನಿಕರ ಆರೋಪ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc