ವಿಕ್ಕಿ ಕೌಶಲ್ ಅವರು ತಮ್ಮ ಮುಂದಿನ ಸಿನಿಮಾ “ಛಾವಾ” ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ವಿಕ್ಕಿ ಕೌಶಲ್ ಅವರ ಛತ್ರಪತಿ ಸಂಭಾಜಿ ಮಹಾರಾಜನ ಫಸ್ಟ್ ಲುಕ್ ಲೀಕ್ ಆಗಿದ್ದು, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“ಛಾವಾ” ಸಿನಿಮಾದಲ್ಲಿ ಕಾಣಿಸಿಕೊಂಡ ಫೋಟೊದಲ್ಲಿ ಅವರು ಉದ್ದನೆಯ ಗಡ್ಡವನ್ನು ಬಿಟ್ಟಿರುವುದನ್ನು ಕಾಣಬಹುದು. ಬೀಜ್ ಸ್ಲೀವ್ಲೆಸ್ ಜಾಕೆಟ್ ಮತ್ತು ಸಾಂಪ್ರದಾಯಿಕ ಪರಿಕರಗಳನ್ನು ಹಾಕಿಕೊಂಡಿದ್ದಾರೆ. ವಿಕ್ಕಿ ಹೊಸ ಅವತಾರ ಕಂಡು ಅವರ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.
ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. ಈ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ, ಯುದ್ಧಗಳು ಹಾಗೂ ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಅಲ್ಲದೇ ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಒಳಗೊಂಡಿದೆ.
“ಸ್ತ್ರೀ ಭೇಡಿಯಾ” ಮೊದಲಾದ ಸಿನಿಮಾಗಳಿಗೆ ಬಂಡವಾಳ ಹೂಡಿದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. “ಛಾವಾ” ಸಿನಿಮಾ ಈ ಪ್ರೊಡಕ್ಷನ್ ಹೌಸ್ನ ಮೊದಲ ಐತಿಹಾಸಿಕ ಸಿನಿಮಾವಾಗಿದೆ.