ಮಲಯಾಳಂ ಚಿತ್ರರಂಗ ಅಂದ್ರೇನೆ ಡಿಫರೆಂಟ್ ಸಿನಿಮಾ ಫಿಕ್ಸ್ ಅನ್ನೊ ಮಾತಿದೆ ಅದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ತೆರೆಕಂಡ “ಮಂಜುಮ್ಮೇಲ್ ಬಾಯ್ಸ್” ಒಂದು. ಇದೀಗ ಥಿಯೇಟರ್ನಲ್ಲಿ ಭಾರಿ ಸದ್ದು ಮಾಡಿದ್ದ “ಮಂಜುಮ್ಮೇಲ್ ಬಾಯ್ಸ್” ಈಗ ಒಟಿಟಿಗೆ ಕೂಡ ಲಗ್ಗೆ ಇಡಲಿದೆ.
ಫೆಬ್ರವರಿ 22 ರಂದು ಮಲಯಾಳಂನ ಸೂಪರ್ ಹಿಟ್ “ಮಂಜುಮ್ಮೇಲ್ ಬಾಯ್ಸ್” ಚಿತ್ರ ರಿಲೀಸ್ ಆಗಿತ್ತು. ಅದರಲ್ಲೂ ಈ “ಮಂಜುಮ್ಮೇಲ್ ಬಾಯ್ಸ್” ಚಿತ್ರ ದೇಶದ ಗಮನ ಸೆಳೆಯುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದ್ದು, 200 ಕೋಟಿ ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಎನ್ನುವ ಖ್ಯಾತಿಯೂ ಈ ಚಿತ್ರಕ್ಕೆ ಸಿಕ್ಕಿದೆ. ಥಿಯೇಟರ್ನಲ್ಲಿ ಪ್ರೇಕ್ಷಕರ ಗಮನ ಸೆಳೆದ ಈ ಚಿತ್ರ ಒಟಿಟಿ ಗೆ ಬರಲು ಸಿದ್ದವಾಗಿದೆ. ಮೇ 5 ರಂದು ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ.
“ಮಂಜುಮ್ಮೇಲ್ ಬಾಯ್ಸ್” ಸಿನಿಮಾ ಫ್ರೆಂಡ್ಶಿಪ್ ಕಥೆಯಾಗಿದೆ. ಇದರ ಜೊತೆಗೆ ಒಂದಷ್ಟು ಅಡ್ವೆಂಚರ್ ಕೂಡ ಇದೆ. ಕೊಡೈಕೆನಲ್ನಲ್ಲಿರುವಗುಣ ಕೇವ್ನಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. 2006 ರಲ್ಲಿ ಇಲ್ಲಿಗೆ ಒಂದು ಗೆಳೆಯರ ತಂಡ ಟ್ರಿಪ್ ತೆರಳಿರುತ್ತದೆ. ಈ ಪ್ರವಾಸಿ ಸ್ಥಳದಲ್ಲಿರುವ ಡೆವಿಲ್ಸ್ ಕಿಚನ್ ಎಂಬ ಕಂದಕದಲ್ಲಿ ಓರ್ವ ಬೀಳುತ್ತಾನೆ. ಆತನ ರಕ್ಷಸೋ ಕಥೆಯೇ ಮಂಜುಮ್ಮೇಲ್ ಬಾಯ್ಸ್.