ಬೆಂಗಳೂರು: ಸಂಸದ ಪ್ರಜ್ವಲ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ರಿಯಾಕ್ಷನ್ ಮಾಡುವುದಿಲ್ಲ. ದೇವೇಗೌಡರ ಕುಟುಂಬದ ಮೇಲೆ ಹಲವು ತನಿಖೆಗಳು ಆಗುತ್ತಿವೆ. ಈಗಾಗಲೇ ಪ್ರಕರಣವನ್ನು ಎಸ್ಐಟಿಗೆ ನೀಡಲಾಗಿದೆ. ಅವರದ್ದೇ ಸರ್ಕಾರವಿದೆ, ಅವರು ಏನು ಬೇಕಾದರೂ ಮಾಡಲಿ. ಎಸ್ಐಟಿ ತನಿಖೆಗೆ ಕರೆದರೆ ಪ್ರಜ್ವಲ ರೇವಣ್ಣ ಬರುತ್ತಾರೆ, ನನ್ನನ್ನು ತನಿಖೆಗೆ ಕರೆದರೆ ಹೋಗುತ್ತೇನೆ. ನಾವು ಪ್ರಕರಣವನ್ನು ಕಾನೂನು ರೀತಿಯಲ್ಲಿ ಎದುರಿಸುತ್ತೇವೆ ಎಂದರು.