ಪನಾಮ ಧ್ವಜದೊಂದಿಗೆ ಕಚ್ಚಾ ತೈಲ ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಮಾಡುವ ಹಡುಗಿನ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಭಾರತೀಯ ನೌಕಾಸೇನೆ ದಾಳಿಗೊಳಗಾದ ಹಡುಗಿನ ನೆರವಿಗೆ ಧಾವಿಸಿ, 22 ಭಾರತೀಯರನ್ನು ಸೇರಿಸಿದಂತೆ ಒಟ್ಟು 33 ಸಿಬ್ಬಂದಿಯನ್ನ ರಕ್ಷಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡು ಹಡಗಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದ್ದು, ಐ.ಎನ್.ಎಸ್ ಕೊಚ್ಚಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿತ್ತು ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.