ರಿಷಬ್ ಶೆಟ್ಟಿ ನಟಿಸಿರುವ ಮತ್ತು ನಿರ್ದೇಶಿಸಿರುವ ಕಾಂತಾರ ಚಿತ್ರ ಜಗತ್ತಿನಾದ್ಯಂತ ಸಖತ್ ಸುದ್ದಿಯಾಗಿತ್ತು. ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿ ನಂತರ ವಿವಿಧ ಭಾಷೆಗಳಲ್ಲಿ ಬಿಡುಗಡೆಗೊಂಡು ಸಖತ್ ಸೌಂಡ್ ಮಾಡಿದ ಸಿನಿಮಾ ಕಾಂತಾರ. ಇಷ್ಟೇ ಅಲ್ಲದೆ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ಮುಖ ಮಾಡುವಂತೆ ಮಾಡಿತ್ತು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಕಾಂತಾರ ಚಿತ್ರ ಪ್ರೇಕ್ಷಕರನ್ನು ಅಗಾಧವಾಗಿ ತನ್ನತ್ತ ಸೆಳೆದಿತ್ತು. ಮಕ್ಕಳಿಂದ ಹಿಡಿದು ಮನೆ ಮಂದಿಯರನ್ನ ಕುಳಿತಲ್ಲಿಯೇ ಕೈ ಮುಗಿಯುವಂತೆ ಮಾಡಿತ್ತು. ಕರವಾಳಿಯ ಕಲೆ ಸಂಸ್ಕೃತಿಯ ಆಚರಣೆಗಳ ಬಗ್ಗೆ ಇಡೀ ಜಗತ್ತೇ ಮಾತನಾಡುವಂತೆ ಮಾಡಿತ್ತು ಈ ಕಾಂತಾರ ಸಿನಿಮಾ.
ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ಕಾಂತಾರ ಅಧ್ಯಾಯ 1 ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇದೇ ವಾರ ಪೂರ್ಣ ಪ್ರಮಾಣದ ಚಿತ್ರೀಕರಣ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದ್ದು, ನಿರ್ಮಾಣ ತಂಡ ತಾತ್ಕಾಲಿಕವಾಗಿ ಕುಂದಾಪುರದಲ್ಲಿ ಬಿಡಾರ ಹೂಡಿದೆ. ವಿಜಯ್ ಕಿರಗಂದೂರು ನೇತೃತ್ವದ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ, ಚಲುವೇಗೌಡ ಮತ್ತು ಅವರ ತಂಡದೊಂದಿಗೆ ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳಲು ಸಿದ್ಧವಾಗಿದೆ.