ಸೌತ್ ಇಂಡಸ್ಟ್ರಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಹಾಟ್ ಬ್ಯೂಟಿ ಅಮಲಾ ಪೌಲ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದಾರೆ. ಅಮಲಾ ಪೌಲ್ ಅವರು “ಹೆಬ್ಬುಲಿ” ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ತುಂಬು ಗರ್ಭಿಣಿಯಾಗಿರುವ ಇವರು ರೆಡ್ ಗೌನ್ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
ಅಮಲಾಪೌಲ್ ಅವರಿಗೆ ಇದು 2ನೇ ಮದುವೆಯಾಗಿದ್ದು, ನವೆಂಬರ್ 5ರಂದು ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಆಪ್ತರ ಸಮ್ಮುಖದಲ್ಲಿ ಮದುವೆಯಾದರು. ಈಗ ಕೆಂಪು ಬಣ್ಣದ ಗೌನ್ ಧರಿಸಿ ಕ್ಯಾಮೆರಾಗೆ ಬೇಬಿ ಬಂಪ್ ಲುಕ್ ಪೋಸ್ ಕೊಟ್ಟಿದ್ದಾರೆ. ಫೋಟೋಶೂಟ್ನ ವಿಡಿಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ತಮ್ಮ ಸಂತಸ ಹಂಚಿಕೊಂಡಿದ್ದಾರೆ.