ಕತಾರಿನಲ್ಲಿರುವ ವಕ್ರದ ದೆಹಲಿ ಸಾರ್ವಜನಿಕ ಶಾಲೆಯ ಭವ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ 2024ನೇ ಸಾಲಿನ ವಸಂತೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಗೌರವದಿಂದ ಸನ್ಮಾನಿಸಲಾಯಿತು.
ಸೋಲರಿಯದ ಸಮಾಜಸೇವಕ ಎಂದೇ ಪ್ರಖ್ಯಾತಿ ಹೊಂದಿರುವ ಕರ್ನಾಟಕದ ಬೈಂದೂರು ಮೂಲದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು, ಕರ್ನಾಟಕ ಸಂಘ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಪ್ರಾಯೋಜಕರನ್ನು ವಿನಂತಿಸಿಕೊಳ್ಳುತ್ತೇನೆ. ಸಕಲ ಸಿದ್ಧತೆಗಳನ್ನು ಮಾಡುವಲ್ಲಿ ಅಭಯಹಸ್ತ ನೀಡಿರುವ ಕೃತಜ್ಞತೆಗೆ ವಸಂತೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.