ಈಕೆ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. ಆದರೆ ಸುಂದರಿ ಪಟ್ಟ ಅಲಂಕರಿಸಿದ 2 ವರ್ಷಕ್ಕೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾಳೆ. ಏಸ್ ಲ್ಯಾಂಡಿ ಪರ್ರಾಗಾ ಗೊಯ್ಬುರೊ ಅವರು 23 ವರ್ಷಕ್ಕೆ ಮಿಸ್ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿದ್ದವಳು. 2022ರ ಮಿಸ್ ಈಕ್ವೆಡಾರ್ ಲ್ಯಾಂಡಿ ಪರ್ರಾಗಾ ಗೊಯ್ಬುರೊ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಲ್ಯಾಂಡಿ ಪರ್ರಾಗಾ ಕ್ವೆವೆಡೊ ನಗರದ ರೆಸ್ಟೋರೆಂಟ್ಗೆ ತೆರಳಿದ್ದ ಸಮಯದಲ್ಲಿ ಹಿಂಬಾಲಿಸಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಮಾಡಿರುವ ಕೊಲೆಗಾರರು ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ರೆಸ್ಟೋರೆಂಟ್ಗೆ ಬಂದು ಗುಂಡು ಹಾರಿಸಿರುವ ಲೈವ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುಂಡಿನ ದಾಳಿಗೆ ಒಳಗಾದ ಲ್ಯಾಂಡಿ ಪರ್ರಾಗಾ ಸ್ಥಳದಲ್ಲೇ ರಕ್ತ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈಕ್ವೆಡಾರ್ನಲ್ಲಿ ನಡೆದ ಭ್ರಷ್ಟಾಚಾರ ಹಗರಣದಲ್ಲಿ ಬ್ಯೂಟಿ ಕ್ವೀನ್ ಲ್ಯಾಂಡಿ ಪರ್ರಾಗಾ ಅವರ ಹೆಸರು ಕೇಳಿ ಬಂದಿತ್ತು. ಇಬ್ಬರು ಅಪರಿಚಿತರು ರೆಸ್ಟೋರೆಂಟ್ಗೆ ಗುಂಡಿಕ್ಕಿ ಕೊಂದು ಹೋಗಿದ್ದಾರೆ. ಲ್ಯಾಂಡಿ ಪರ್ರಾಗಾ ಸಾವಿನ ಬಗ್ಗೆ ಉನ್ನತ ತನಿಖೆ ಮುಂದುವರಿದಿದೆ.