ವಾಯುಸೇನೆಯ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಉಗ್ರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಪ್ರದೇಶದಲ್ಲಿ ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ.
ಪೂಂಚ್ ಮತ್ತು ರಜೌರಿಯಲ್ಲಿ ಕಳೆದ ವರ್ಷ ಹಲವು ಭಯೋತ್ಪಾದಕಾ ಘಟನೆಗಳು ನಡೆದಿದ್ದವು. ಈ ವರ್ಷ ನಡೆದ ಮೊದಲ ಘಟನೆ ಇದಾಗಿದೆ. ಇಡೀ ಪೂಂಚ್ ಜಿಲ್ಲೆಯನ್ನು ಈಗ ಹೈ ಅಲರ್ಟ್ ಮಾಡಲಾಗಿದೆ. ಸುರನ್ಕೋಟೆಯ ಸನೈ ಟಾಪ್ ಮತ್ತು ಗಡಿ ಪೂಂಚ್ ಜಿಲ್ಲೆಯ ಮೆಂಧರ್ ನ ಗುರ್ಸಾಯ್ ಪ್ರದೇಶದ ನಡುವೆ ದಟ್ಟವಾದ ಮರಗಳು ಮತ್ತು ಶಾ ಸತ್ತಾರ್ ಅರಣ್ಯ ಪ್ರದೇಶದಲ್ಲಿ ದಾಳಿ ನಡೆದಿದೆ.