ನಟ ವಿನೋದ್ ರಾಜ್ ಅವರು ಇತ್ತೀಚೆಗೆ ನಟನೆಯಲ್ಲಿ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಇವರು ಸಿನಿಮಾದಿಂದ ದೂರನೇ ಉಳಿದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತಾಯಿ ಕಳೆದುಕೊಂಡ ಇವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಸಮಾಜಿಕ ಸೇವೆ ಮಾಡುವ ಮೂಲಕ ವಿನೋದ್ ರಾಜ್ ಸುದ್ದಿಯಾಗಿದ್ದಾರೆ.
ವಿನೋದ್ ರಾಜ್ ಅವರು ಬೆಂಗಳೂರಿನ ನೆಲಮಂಗಲದ ಕರೆಕಲ್ ಕ್ರಾಸ್ ನಿಂದ ಸೋಲದೇವನಹಳ್ಳಿವರೆಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದ್ದು, ಇದನ್ನು ತಪ್ಪಿಸಲು ನಟ ವಿನೋದ್ ರಾಜ್ ಸ್ವಂತ ಹಣ ಖರ್ಚು ಮಾಡಿ ರಸ್ತೆ ರಿಪೇರಿ ಮಾಡಿಸುತ್ತಿದ್ದಾರೆ. ವಿನೋದ್ ರಾಜ್ ಅವರ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.