ನವದೆಹಲಿ: ಹೆಲ್ತ್ ಅಪ್ಸೆಟ್ ರೀಸನ್ ನೀಡಿ ಏರ್ ಇಂಡಿಯಾದ ಎಕ್ಸ್ ಪ್ರೆಸ್ ಸಿಬ್ಬಂದಿ ಸಾಮೂಹಿಕ ರಜೆ ಹಾಕಿದ್ದು, 86 ಫ್ಲೈಟ್ಸ್ ಹಾರಾಟ ರದ್ದುಗೊಂಡಿದೆ.
ಅನಾರೋಗ್ಯದ ಕಾರಣ ನೀಡಿ ಸುಮಾರು 300 ಸಿನಿಯರ್ ಕ್ಯಾಬಿನ್ ಸಿಬ್ಬಂದಿ ಏಕಕಾಲಕ್ಕೆ ಗೈರಾಗಿದ್ದಾರೆ. ಸಿಬ್ಬಂದಿ ಯಾವುದೇ ಮೊಬೈಲ್ ಕರೆಗಳನ್ನು ಸ್ವಿಕರೀಸದೆ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಡೊಮೆಸ್ಟಿಕ್ ಮತ್ತು ಇಂಟರ್ ನ್ಯಾಷನಲ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇನ್ನೂ ಸಂಬಳದ ವಿಚಾರವಾಗಿ ಅಸಮಾಧಾನ ಹೊಂದಿರುವ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಂಪನಿಗೆ ಯಾವುದೇ ನೋಟಿಸ್ ನೀಡದೆ ಅನಾರೋಗ್ಯದ ನೆಪವೊಡ್ಡಿ ಕೆಲಸಕ್ಕೆ ಗೈರಾಗಿದ್ದಾರೆ. ಈ ಹಿನ್ನೆಲೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ ಏರ್ ಇಂಡಿಯಾ, ಹಣ ಹಿಂದಿರುಗಿಸುದಾಗಿ ತಿಳಿಸಿದೆ ಪ್ರಯಾಣದ ದಿನಾಂಕವನ್ನು ಮರು ಹೊಂದಾಣಿಕೆ ಮಾಡಲಾಗುವುದು ಎಂದು ಏರ್ಲೈನ್ಸ್ ತಿಳಿಸಿದೆ.