ಭಾರತೀಯ ಚಿತ್ರರಂಗದ ದಿಗ್ಗಜರೆನಿಸಿಕೊಂಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಭರ್ತಿ 33 ವರ್ಷಗಳು ಕಳೆದ ಮೇಲೆ ಒಂದಾಗಿದ್ದಾರೆ.
ವೆಟ್ಟಯ್ಯನ್ ಸಿನಿಮಾದಲ್ಲಿ ಈ ಇಬ್ಬರು ಸೂಪರ್ ಸ್ಟಾರ್ ಗಳು ಸ್ಕ್ರೀನ್ ಶೇರ್ ಮಾಡಿದ್ದು, ಈ ಜೋಡಿಯ ಕಾಂಬಿನೇಷನ್ ನಲ್ಲಿ ಬರುವಂತಹ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ತಮ್ಮ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟಿರುವ ಬಾಲಿವುಡ್ ಬಿಗ್ ಬಿ, ವೆಟ್ಟಯ್ಯನ್ ಸಿನಿಮಾ ತಂಡವನ್ನ ಶ್ಲಾಘಿಸಿದ್ದಾರೆ. ತಮ್ಮ ಸೋಷಿಯಲ್ ಪುಟದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅಮಿತಾಬ್, ತಲೈವಾ ಸರಳ- ಸಜ್ಜನಿಕೆಯನ್ನ ಕೊಂಡಾಡಿದ್ದಾರೆ. ಬಾಬಾನ ಅಪ್ಪಿಕೊಂಡಿರುವ ಫೋಟೋ ಶೇರ್ ಮಾಡುವ ಮೂಲಕ ರಜನಿ ಜೊತೆಗಿನ ಸ್ನೇಹ- ಸಂಬಂಧ- ಬಾಂದವ್ಯ ಎಂತಹದ್ದು ಅನ್ನೋದನ್ನ ತಿಳಿಸಿಕೊಟ್ಟಿದ್ದಾರೆ.
ವೆಟ್ಟಯ್ಯನ್ ಚಿತ್ರದಲ್ಲಿ ಅಮಿತಾಬ್ ಯಾವ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆನ್ನುವ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಸೂಟು-ಬೂಟು ತೊಟ್ಟು ಕ್ಯಾಮೆರಾ ಮುಂದೆ ಬಂದಿರೋ ಬಾಲಿವುಡ್ ಬಾಬಾರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಭರ್ತಿ 33 ವರ್ಷಗಳು ಕಳೆದ ಮೇಲೆ ಬಿಗ್ ಬಿ- ರಜನಿ ಒಟ್ಟಿಗೆ ತೆರೆ ಮೇಲೆ ಬರ್ತಿರೋದ್ರಿಂದ ನಿರೀಕ್ಷೆ ಹೆಚ್ಚಿದೆ.ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿ ಕಮಾಲ್ ಮಾಡಿದ ಈ ಜೋಡಿಯ ಜುಗಲ್ ಬಂಧಿನಾ ಮತ್ತೊಮ್ಮೆ ಕಣ್ತುಂಬಿಕೊಳ್ಳೋಕೆ ಎಲ್ಲರು ಕಾತುರರಾಗಿದ್ದಾರೆ.
ಇನ್ನೂ ಹಮ್ ಸಿನಿಮಾ ನಂತರ ಇವರಿಬ್ಬರನ್ನು ತೆರೆಮೇಲೆ ತರುವ ಪ್ರಯತ್ನ ನಡೆದಿತ್ತಾದರೂ ಸಾಧ್ಯವಾಗಿರಲಿಲ್ಲ. ಇದೀಗ ಲೈಕಾ ಸಂಸ್ಥೆ ಆ ವಿಚಾರದಲ್ಲಿ ಯಶಸ್ವಿಯಾಗಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟಯ್ಯನ್ ಗೆ ಬಂಡವಾಳ ಹೂಡಿದೆ. ತಲೈವಾ ನಟನೆಯ 170 ನೇ ಸಿನಿಮಾ ಇದಾಗಿದ್ದು, ರಜನಿ- ಬಿಗ್ ಬಿ ಜೊತೆ ಬಾಹುಬಲಿ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಭಾಟಿ, ಪುಷ್ಪ ಖ್ಯಾತಿಯ ಫಹಾದ್ ಫಾಸಿಲ್, ಮಂಜು ವಾರಿಯರ್, ದುಶಾರಾ ವಿಜಯನ್, ರಿತಿಕಾ ಸಿಂಗ್ ನಂತಹ ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿದೆ. ರಾಕ್ ಸ್ಟಾರ್ ಅನಿರುದ್ಧ್ ಒನ್ಸ್ ಎಗೇನ್ ರಜನಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ವೆಟ್ಟಯ್ಯನ್ ತಲೈವಾ ನಟನೆಯ ಬಹು ನಿರೀಕ್ಷಿತ ಚಿತ್ರ. ಜೈಲರ್ ನಂತರ ಜೈ ಭೀಮ್ ನಿರ್ದೇಶಕರ ವೆಟ್ಟಯ್ಯನ್ ಸಿನಿಮಾ ಅಖಾಡಕ್ಕೆ ಧುಮ್ಕಿರೋ ಪಡೆಯಪ್ಪ, ಲಾಠಿ ಹಿಡಿದು ಕಣಕ್ಕಿಳಿದಿದ್ದಾರೆ. ಪೊಲೀಸ್ ಪವರ್ ತೋರಿಸಲು ಬರ್ತಿರೋ ಶಿವಾಜಿ, ಈಗಾಗಲೇ ಟೀಸರ್ ನಲ್ಲಿ ತಮ್ಮ ಸ್ಟೈಲ್, ಸ್ವ್ಯಾಗ್ ಮೂಲಕ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದ್ದಾರೆ. ಈಚಿತ್ರದ ಜೊತೆಗೆ 171 ಸಿನಿಮಾಗೂ ಸೈ ಎಂದಿದ್ದಾರೆ. ಇತ್ತೀಚಿಗಷ್ಟೇ ಆ ಸಿನಿಮಾದ ಟೈಟಲ್ ಅನಾವರಣ ಮಾಡಲಾಗಿದೆ. ಚಿತ್ರಕ್ಕೆ ಕೂಲಿ ಅಂತ ಟೈಟಲ್ ಇಟ್ಟಿದ್ದು, ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಸನ್ಪಿಕ್ಚರ್ಸ್ ಸಂಸ್ಥೆ ಬಂಡವಾಳ ಹೂಡಿದ್ದು, ರಿಲೀಸ್ ಆಗಿರೋ ಟೈಟಲ್ ಟೀಸರ್ ಸೂಪರ್ ಸ್ಟಾರ್ ಫ್ಯಾನ್ಸ್ ಗೆ ಕಿಕ್ ಕೊಟ್ಟಿದೆ. ಕೂಲಿ ಮೇಲಿನ ಕುತೂಹಲ ಬೆಟ್ಟದಷ್ಟು ಬೆಳೆದಿದೆ. ಒಟ್ನಲ್ಲಿ ತಲೈವಾ ವಯಸ್ಸು 72 ಕಳೆದರೂ ಏಜ್ ಈಸ್ ಜಸ್ಟ್ ಎ ನಂಬರ್ ಅಂತ ಪ್ರೂವ್ ಮಾಡ್ತಾ ಮುನ್ನಗುತ್ತಿದ್ದಾರೆ. ಅಭಿಮಾನಿಗಳನ್ನ ರಂಜಿಸ್ತಿದ್ದಾರೆ.