ಬಾಲಿವುಡ್ ಹಾಟ್ ಕಪಲ್ ದೀಪಿಕಾ ಅಂಡ್ ರಣವೀರ್ ಸಿಂಗ್ ರೀಸೆಂಟ್ ಆಗಿ ತಂದೆ ತಾಯಿ ಆಗ್ತಿರೋ ಖುಷಿ ಸುದ್ದಿಯನ್ನ ಹಂಚಿಕೊಂಡಿದ್ರು…. ಆದ್ರೆ ಇದೀಗ ಡಿಪ್ಪಿ ಬಗ್ಗೆ ಶಾಕಿಂಗ್ ನ್ಯೂಸ್ ಒಂದು ಹರಿದಾಡ್ತಿದೆ..
ದೀಪಿಕಾ ಅಂಡ್ ರಣವೀರ್ ಸಿಂಗ್ ಮೋಸ್ಟ್ ಲವೇಬಲ್ ಕಪಲ್… ಸದಾ ನಗುಮುಖದಿಂದಲೇ ಕ್ಯಾಮೆರಾ ಮುಂದೆ ಪೋಸ್ ಕೊಡ್ತಿದ್ರು.. ಎಲ್ಲಕಿಂತ ಹೆಚ್ಚಾಗಿ ಪೋಷಕರಾಗ್ತಿರೋ ಖುಷಿ ಹಂಚಿಕೊಂಡಿದ್ರು….
ಒಂದಷ್ಟು ವರ್ಷಗಳ ಕಾಲ ಪ್ರೀತಿಸಿ 2018ರಲ್ಲಿ ಮದುವೆ ಆಗಿದ್ರು.. ಆದ್ರೀಗ ಈ ಜೋಡಿ ಬೇರೆ ಆಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ಸುದ್ದಿಗೆ ಪುಷ್ಟಿ ನೀಡ್ತಾ ಇರೋದು ರಣ್ವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಮದುವೆ ಫೋಟೊಗಳನ್ನು ಡಿಲೀಟ್ ಮಾಡಿರುವ ವಿಚಾರ ಅಭಿಮಾನಿಗಳಲ್ಲಿ ಆತಂಕ ತಂದಿದೆ. 2013 ರಿಂದ ಮಾಡಿರುವ ಬಹುತೇಕ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ..
ಆದ್ರೆ ಮತ್ತೊಂದ್ಕಡೆ ದೀಪಿಕಾ ಮತ್ತು ರಣವೀರ್ ಜೊತೆಯಾಗಿರುವ ಬೇರೆ ಕೆಲ ಫೋಟೋಗಳು ಹಾಗೆಯೇ ಇವೆ. ಇದ್ರಿಂದ ಕೆಲವರು ಇದು ಸುಳ್ಳು ಸುದ್ದಿ.. ಈ ಜೋಡಿ ಬೇರೆಯಾಗೋ ಮಾತೆ ಇಲ್ಲ ಅಂತಿದ್ದಾರೆ.. ಇಷ್ಟೆಲ್ಲಾ ಚರ್ಚೆ ಆಗ್ತಿದ್ರು ಈ ಜೋಡಿ ಮಾತ್ರ ಈ ಬಗ್ಗೆ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ..ಆದ್ರೆ ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೋಗಳು ಡಿಲೀಟ್ ಆಗಿಲ್ಲ .. ಹಾಗಾಗಿ ಇದು ರೂಮರ್ ಅಷ್ಟೇ ಅಂತ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ..