ಶಿವಕಾಶಿ : ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಭಾರತದ ಪಟಾಕಿ ಕೇಂದ್ರ ಎಂದು ಕರೆಯಲ್ಪಡುವ ಶಿವಕಾಶಿ ಬಳಿಯ ಪಟಾಕಿ ಉತ್ಪಾದನಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಹನ್ನೆರಡು ಮಂದಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ದುರ್ಘಟನೆ ನಡೆದ ಕಾರ್ಖಾನೆ ಲೈಸನ್ಸ್ ಪಡೆದ ಕಾರ್ಖಾನೆಯಾಗಿದೆ.
ಸ್ಪೋಟದ ಹಿಂದಿನ ಕಾರಣ ಕಂಡುಹಿಡಿಯಲು ಪೊಲೀಸರೊಂದಿಗೆ ಸ್ಥಳೀಯ ತನಿಖಾ ಸಂಸ್ಥೆಗಳು ತನಿಖೆಗೆ ಪ್ರಾರಂಭಿಸಿವೆ. ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಭಾರತದ ಪಟಾಕಿ ಉತ್ಪಾದನಾ ಕೇಂದ್ರವೆಂದು ಪ್ರಸಿದ್ಧವಾಗಿರುವ ಶಿವಕಾಶಿ, ಭಾರತದಲ್ಲಿ ಅತಿ ಹೆಚ್ಚು ಪಟಾಕಿಗಳು ತಯಾರಿಸುವ ಕೇಂದ್ರವಾಗಿದೆ.