- ಇಂಟ್ರೆಸ್ಟಿಂಗ್ ಅಂದರೆ ನಂಗೆ ಜೋಡಿಯಾಗಿ ರಶ್ಮಿಕಾನೇ ಬೇಕು ಅಂತ ವಿಜಯ್ ಹಠ ಹಿಡಿದಿದ್ದಾರಂತೆ.
- ಕಿಸ್ಸಿಂಗ್ ಸ್ಟಾರ್ ವಿಜಯ್ 14 ಸಿನಿಮಾಗೆ ಕಿರಿಕ್ ಬ್ಯೂಟಿಯೇ ನಾಯಕಿಯಂತೆ.
- ವಿಜಯ್ 14 ಚಿತ್ರಕ್ಕೆ ರಶ್ಮಿಕಾ ಫಿಕ್ಸ್ ಆಗಿರುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಟಿಟೌನ್ ಹಿಟ್ ಪೇರ್ ಗಳ ಪೈಕಿ ರೌಡಿಬಾಯ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿ ಕೂಡ ಒಂದು. ಗೀತಗೋವಿಂದಂ ಮೂಲಕ ಒಂದಾದ ಈ ಜೋಡಿ, “ಡಿಯರ್ ಕಾಮ್ರೇಡ್” ಚಿತ್ರದಲ್ಲೂ ಕಮಾಲ್ ಮಾಡಿತ್ತು. ಅನಂತರ ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಒಟ್ಟಿಗೆ ಸಿನಿಮಾ ಮಾಡೋದಕ್ಕೆ ಆಗಿರಲಿಲ್ಲ.
ಇದೀಗ ಈ ಕಾಂಬೋ ಮತ್ತೆ ರಿಪೀಟ್ ಆಗ್ತಿದೆ. ಇಂಟ್ರೆಸ್ಟಿಂಗ್ ಅಂದರೆ ನಂಗೆ ಜೋಡಿಯಾಗಿ ರಶ್ಮಿಕಾನೇ ಬೇಕು ಅಂತ ವಿಜಯ್ ಹಠ ಹಿಡಿದಿದ್ದಾರಂತೆ. ಹೀಗಾಗಿ, ಪ್ರೊಡ್ಯೂಸರ್ ನ್ಯಾಷನಲ್ ಕ್ರಷ್ ನ ಅಪ್ರೋಚ್ ಮಾಡಿದ್ದಾರೆನ್ನಲಾಗ್ತಿದೆ.
ಕಿಸ್ಸಿಂಗ್ ಸ್ಟಾರ್ ವಿಜಯ್ 14 ಸಿನಿಮಾಗೆ ಕಿರಿಕ್ ಬ್ಯೂಟಿಯೇ ನಾಯಕಿಯಂತೆ. ನಿನ್ನೆಯಷ್ಟೇ ವಿಜಯ್ ಬರ್ತ್ ಡೇಗೆ ಸಿನಿಮಾ ಅನೌನ್ಸ್ ಆಗಿದ್ದು, ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಅಧಿಕೃತವಾಗಿ ಸಿನಿಮಾ ಘೋಷಿಸಿದೆ. ಟ್ಯಾಕ್ಸಿವಾಲ ಡೈರೆಕ್ಟರ್ ರಾಹುಲ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
1854 ರಿಂದ 1878ರ ಕಾಲಘಟ್ಟದಲ್ಲಿ ನಡೆಯುವ ಕಥೆಗೆ ರೌಡಿಬಾಯ್ ನಾಯಕ. ರಶ್ಮಿಕಾ ನಾಯಕಿ ಅನ್ನೋದು ಸದ್ಯದ ಸೆನ್ಸೇಷನ್ ಸಮಾಚಾರ. ಈ ಸುದ್ದಿ ಕೇಳಿದ ಬಾಬಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.
ಅಷ್ಟಕ್ಕೂ, ಫಿಲ್ಮ್ ಟೀಮ್ ಕಡೆಯಿಂದ ವಿಜಯ್ 14 ಚಿತ್ರಕ್ಕೆ ರಶ್ಮಿಕಾ ಫಿಕ್ಸ್ ಆಗಿರುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಸಾನ್ವಿನಾ ಸೆಲೆಕ್ಟ್ ಮಾಡಿ ಅಂತ ವಿಜಯ್ ಶಿಫಾರಸ್ಸು ಮಾಡಿದ್ದಾರೆನ್ನುವ ಸುದ್ದಿಯಂತೂ ಜೋರಾಗಿ ಹಬ್ಬಿದೆ. ಸದ್ಯ, ರಶ್ಮಿಕಾ ಪುಷ್ಪ-2, ಛಾವಾ, ದಿ ಗರ್ಲ್ ಫ್ರೆಂಡ್, ಕುಬೇರ, ರೈನ್ ಬೋ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೇ ಸಲ್ಮಾನ್ ಸಿಕಂದರ್ ಸಿನಿಮಾಗೆ ಆನ್ ಬೋರ್ಡ್ ಆಗಿದ್ದಾರೆ.
ಈಗ ರೌಡಿಬಾಯ್ ವಿಜಯ್ ಸಿನಿಮಾಗೆ ಸೆಲೆಕ್ಟ್ ಅನ್ನೋ ಸುದ್ದಿಯಿಂದ ಸಿನಿದುನಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಒಂದ್ವೇಳೆ ಈ ಸುದ್ದಿ ನಿಜವಾದರೆ ಕಿಕ್ಕೇರಿಸೋ ಕ್ಯೂಟ್ ಕಪಲ್ಸ್ ನ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳಬಹುದು. ರಶ್ಮಿಕಾ ಕೈ ಹಿಡಿದಿರೋ ಅದೃಷ್ಟ, ರೌಡಿಬಾಯ್ ಕೈಹಿಡಿದರೆ ಇಬ್ಬರು ಜೋಡಿಯಾಗಿ ಮಾಯಲೋಕದಲ್ಲಿ ಮಗದೊಮ್ಮೆ ಮೆರೆಯಬಹುದು. ಹಾಗಾಗುತ್ತಾ? ಈ ಪ್ರಶ್ನೆಗೆ ಕಾದುನೋಡಬೇಕಷ್ಟೇ.