- ವಿದ್ಯಾರ್ಥಿನಿ ಮೀನಾಳ ರುಂಡ, ಕೊಲೆ ನಡೆದ ಸ್ಥಳದ ಪೊದೆಯೊಂದರಲ್ಲಿ ಪತ್ತೆ
- ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
- ತಲೆ ವಶಕ್ಕೆ ಪಡೆದು ಬಾಲಕಿ ಮನೆ ಬಳಿ ಮಹಜರ್ ನಡೆಸಿದ್ದಾರೆ.
ಕೊಡಗು : ಸೋಮವಾರಪೇಟೆ ತಾಲೂಕಿನ ಸೂರ್ಲಿಬ್ಬಿ ಗ್ರಾಮದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾಳ ರುಂಡ, ಕೊಲೆ ನಡೆದ ಸ್ಥಳದ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಮೀನಾಳನ್ನು ಕೊಲೆ ಮಾಡಿದ ಆರೋಪಿ ಪ್ರಕಾಶ್ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಯನ್ನು ಸ್ಥಳ ಮಹಜರುಗೆ ಕರೆದುಕೊಂಡು ಹೋದಾಗ ರುಂಡ ಇದ್ದ ಸ್ಥಳ ತೋರಿಸಿದ್ದಾನೆ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಶುಕ್ರವಾರ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾಳ ತಲೆ ಸಿಕ್ಕಿರಲಿಲ್ಲ. ಮಗಳ ತಲೆ ಸಿಗದೆ ಮೃತದೇಹದ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪೋಷಕರು ಪಟ್ಟುಹಿಡಿದಿದ್ದರು. ಹೀಗಾಗಿ ಶನಿವಾರ ಮತ್ತೆ 40 ಕ್ಕೂ ಹೆಚ್ಚು ಪೊಲೀಸರಿಂದ ಶೋಧ ಕಾರ್ಯ ನಡೆದಿದ್ದು, ಹತ್ಯೆಯಾಗಿದ್ದ ಮೀನಾ ರುಂಡ ಪತ್ತೆ ಮಾಡಿದ್ದಾರೆ. ತಲೆ ಭಾಗವನ್ನು ವಶಕ್ಕೆ ಪಡೆದು ಬಾಲಕಿ ಮನೆ ಬಳಿ ಮಹಜರ್ ನಡೆಸಿದ್ದಾರೆ.