ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಪ್ಲೇ ಆಫ್ ಹೋಗಲಿ ಎಂಬ ಕನಸು ಕಾಣುತ್ತಿದ್ದರೆ ಸದ್ಯ ಬೆಂಗಳೂರಿನ ವಾತಾವರಣ ಬದಲಾಗಿ ಸತತ ಒಂದು ವಾರದಿಂದ ವರುಣನ ಆರ್ಭಟಿಸುತ್ತಿದ್ದು, ಹವಾಮಾನ ಇಲಾಖೆಯೂ ಕೂಡ ಈ ಬಗ್ಗೆ ಮುನ್ಸೂಚನೆ ಹೊರಡಿಸಿದೆ. ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ತುಂತುರು ಮಳೆಯಾಗುತ್ತಿದೆ. ಇನ್ನೂ ಚಿನ್ನಸ್ವಾಮಿ ಸ್ಟೇಡಿಯಂನತ್ತ ವರುಣ ಆಗಮಿಸಿದ್ರೆ ಆರ್ಸಿಬಿಯ ಹೊಸ ಅಧ್ಯಾಯ ಇಲ್ಲಿಗೆ ಮುಕ್ತಾಯವಾಗಲಿದೆ.
ಆರ್ಸಿಬಿಗೆ ಮುಂದಿನ 2 ಪಂದ್ಯಗಳು ಪ್ಲೇ ಆಫ್ ಭವಿಷ್ಯದ ಮುನ್ಸೂಚಕವಾಗಿದೆ. ಕಾರಣ ಆರ್ಸಿಬಿ ಎದುರಿಸಿರುವ 12 ಪಂದ್ಯಗಳಲ್ಲಿ 7 ಪಂದ್ಯ ಸೋತಿದೆ. 5 ಪಂದ್ಯ ಜಯಿಸಿದೆ. ಹಾಗಾಗಿ ಮುಂದಿನ 2 ಪಂದ್ಯ ಆರ್ಸಿಬಿಗೆ ಭವಿಷ್ಯ ಸೂಚಕವಾಗಿದೆ. ಒಂದು ವೇಳೆ ಮಳೆ ಬಂದು ಪಂದ್ಯ ಸ್ಥಗಿತವಾದರೆ ಆರ್ಸಿಬಿಗೆ ಸಂಕಷ್ಟ ಖಚಿತ. ಆದರೆ ಅಭಿಮಾನಿಗಳಂತೂ ಮಳೆ ಬಾರದಂತೆ ದೇವರ ಮೊರೆ ಹೋಗಿದ್ದಾರೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಜಯಿಸುವಂತೆ ಜಪಿಸುತ್ತಿದ್ದಾರೆ.
ಇನ್ನೂ ಹವಾಮಾನ ಇಲಾಖೆ ಇನ್ನೂ ಕೆಲವು ದಿನ ಸಾಧಾರಣ ಹಾಗೂ ಮಧ್ಯಮ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಲಾಗಿತ್ತು. ಮೇ 13ರವರೆಗೂ ಬೆಂಗಳೂರು ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು.
ಹಿರಿಯ ಹವಾಮಾನ ವಿಜ್ಞಾನಿ ಸಿ.ಎಸ್ ಪಾಟೀಲ್ ಅವರು ಕರ್ನಾಟಕದಲ್ಲಿ ಒಂದು ವಾರಗಳ ಕಾಲ ಜೋರಾದ ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿರಲಿದೆ. ಬೆಂಗಳೂರಲ್ಲಿ ಮುಂದಿನ ವಾರವೂ ಸಾಧಾರಣ ಮಳೆ ಮುಂದುವರಿಯಲಿದ್ದು, ವಾತಾವರಣದಲ್ಲಿ ಉಷ್ಣಾಂಶ ಕುಸಿಯಲಿದೆ ಎಂದಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಬೆಂಗಳೂರಲ್ಲಿ ಮಳೆ ಸಂಪೂರ್ಣವಾಗಿ ಮಾಯವಾಗಿತ್ತು. ಆದರೆ ಮೇ ತಿಂಗಳಲ್ಲಿ ರಾಜ್ಯದಲ್ಲಿ 7 ಸೆಂ.ಮೀಟರ್ನಷ್ಟು ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿಯೇ ಬೆಂಗಳೂರಿಗೆ ಝೆಲ್ಲೋ ಅಲರ್ಟ್ ನೀಡಲಾಗಿದೆ.