ಆಂಧ್ರ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ವೇಳೆ ಅಹಿತಕರ ಘಟನೆಯೊಂದು ನಡೆದಿದೆ. ವೋಟ್ ಹಾಕಲು ಮತಗಟ್ಟೆಗೆ ಬಂದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಅಭ್ಯರ್ಥಿಯೊಬ್ಬರು ಸ್ಥಳದಲ್ಲಿದ್ದ ಸಾಮಾನ್ಯ ಮತದಾರನೋರ್ವನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರ ಬೆನ್ನಲ್ಲೇ ಮತದಾರ ಕೂಡ ತಾಳ್ಮೆ ಕಳೆದುಕೊಂಡು ಶಾಸಕರ ಕೆನ್ನೆಗೆ ಹೊಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಅಸಲಿಗೆ ವಿಷಯ ಏನು ಗೋತ್ತಾ…?
ಆಂಧ್ರ ಪ್ರದೇಶದ ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ತೆನಾಲಿಯಲ್ಲಿ ವೈಸಿಪಿ ಶಾಸಕ, ಸದ್ಯ ಅಭ್ಯರ್ಥಿಯಾಗಿ ಅನ್ನಾಬತ್ತುನಿ ಶಿವಕುಮಾರ್ ಎಂಬವರು ಸ್ಪರ್ಧೆ ಮಾಡಿದ್ದಾರೆ. ಇಂದು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದು, ಆ ವೇಳೆಗೆ ಮತದಾರರು ತಮ್ಮ ವೋಟ್ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಕ್ಯೂ ನಿಂತಿರುವುದನ್ನು ಲೆಕ್ಕಿಸದೆ ಶಾಸಕ, ನೇರವಾಗಿ ವೋಟ್ ಚಲಾಯಿಸಿದ್ದಾರೆ.
ಈ ಹಿನ್ನೆಲೆ ಸರತಿ ಸಾಲಿನಲ್ಲಿದ್ದ ಸಾಮಾನ್ಯ ಮತದಾರ ಶಾಸಕರ ನಡೆಗೆ ಬೇಸರ ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ. ಸಾಮಾನ್ಯ ಮತದಾರ ಪ್ರಶ್ನೆಸುತ್ತಿದ್ದಂತೆ ಕೋಪಗೊಂಡ ಹಾಲಿ ಶಾಸಕ ನೇರ ಮತದಾರನ ಬಳಿ ಬಂದು ನೋಡ ನೋಡುತ್ತಿದ್ದಂತೆ ಕಪಾಳಮೋಕ್ಷ ಮಾಡಿದ್ದಾನೆ. ಇದನ್ನು ಸಹಿಸದೇ ಸಾಮಾನ್ಯ ಮತದಾರ ಕೂಡ ಶಾಸಕರ ಕೆನ್ನೆಗೆ ಹೊಡೆದಿದ್ದಾನೆ. ಇತ್ತ ಶಾಸಕರ ಬೆಂಬಲಿಗರು ಎಂಟ್ರಿ ಕೊಟ್ಟು ಮತದಾರನಿಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋವನ್ನು ತೆಲುಗುದೇಶಂ ಪಾರ್ಟಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮತದಾರನ ಮೇಲೆ ಹಲ್ಲೆ ಮಾಡಿದ ವೈಸಿಪಿ ಶಾಸಕನಿಗೆ ತಿರುಗಿ ಹೊಡೆದ ಸಾಮಾನ್ಯ ಮತದಾರ. ಪ್ರಜೆಗಳ ಆಗ್ರಹದಲ್ಲಿ ವೈಸಿಪಿ ಪಕ್ಷದ ಕೊಚ್ಚಿ ಹೋಗುತ್ತಿದೆ ಎಂದು ಬರೆದುಕೊಂಡಿದೆ.