ಎ.ಆರ್.ರೆಹಮಾನ್ ಭಾರತದ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. 57 ವರ್ಷದಲ್ಲಿ ರೆಹಮಾನ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ರೆಹಮಾನ್ ಹಾಗೂ ಸೈರಾ 1995 ರಲ್ಲಿ ವಿವಾಹವಾದ್ರು. 29 ವರ್ಷಗಳ ಬಳಿಕ ದಾಂಪತ್ಯಕ್ಕೆ ತೆರೆ ಎಳೆದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಹೆಸರು ಖತೀಜಾ ಮತ್ತು ರಹೀಮಾ. ಮಗನ ಹೆಸರು ಅಮೀನ್ ರೆಹಮಾನ್.
ಸೈರಾ ಬಾನು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡುವ ಮೂಲಕ ಡಿವೋರ್ಸ್ ಪಡೆಯುವ ವಿಚಾರವನ್ನು ಜನರಿಗೆ ತಿಳಿಸಿದ್ದಾರೆ. ಎಆರ್ ರೆಹಮಾನ್ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಎ. ಆರ್ ರೆಹಮಾನ್ ಗಾಯಕರು ಕೂಡ ಆಗಿದ್ದಾರೆ. ಒಂದು ಹಾಡಿಗೆ ಸುಮಾರು 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ರೆಹಮಾನ್ ಕೆಲವೇ ಹಾಡುಗಳಿಗೆ ಹಾಡಿದ್ದಾರೆ. ಅನೇಕ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಎಆರ್ ರೆಹಮಾನ್ ಅವರ ಒಟ್ಟು ಸಂಪತ್ತು 2100 ಕೋಟಿ ಎನ್ನಲಾಗ್ತಿದೆ.
ಸೈರಾ ಬಾನು ಡಿವೋರ್ಸ್ ಪಡೆಯುವ ವಿಚಾರವನ್ನು ಪತ್ರಿಕಾ ಪ್ರಕಟಣೆ ಮೂಲಕ ಜನರಿಗೆ ತಿಳಿಸಿದ್ದಾರೆ. ಎಆರ್ ರೆಹಮಾನ್ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದು ಪತ್ನಿಗೆ ನೀಡುತ್ತಿರುವ ಜೀವನಾಂಶ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ 10 ಜುಲೈ 2024 ರ ಐತಿಹಾಸಿಕ ತೀರ್ಪಿನಲ್ಲಿ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಒತ್ತಿ ಹೇಳಿದೆ.
ಜೀವನಾಂಶದ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ಅನೇಕ ಅಂಶಗಳನ್ನು ಕೋರ್ಟ್ ಪರಿಗಣಿಸುತ್ತದೆ. ಡಿವೋರ್ಸ್ಬಳಿಕ ಹೆಂಡತಿಗೆ ಪತಿಯ ನಿವ್ವಳ ಮಾಸಿಕ ವೇತನದ 25 ಪ್ರತಿಶತವನ್ನು ನೀಡಬೇಕಾಗುತ್ತದೆ. ಜೀವನಾಂಶದ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ನ್ಯಾಯಾಲಯಗಳು ಅನೇಕ ಅಂಶಗಳನ್ನು ಪರಿಗಣಿಸುತ್ತವೆ. ವಿಚ್ಛೇದನದ ನಂತರ ಪತಿಯ ನಿವ್ವಳ ಮಾಸಿಕ ವೇತನದ 25 ಪ್ರತಿಶತವನ್ನು ನೀಡಬೇಕಾಗುತ್ತದೆ. ಸೈರಾಗೂ ರೆಹಮಾನ್ ಕೋಟಿ ಕೋಟಿ ಜೀವನಾಂಶ ನೀಡಲಿದ್ದಾರೆ ಎನ್ನಲಾಗ್ತಿದೆ. ಸೈರಾ ಬಾನು ಅವರು ರೆಹಮಾನ್ ಅವರಿಂದ ಎಷ್ಟು ಜೀವನಂಶವನ್ನು ಪಡೆಯುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.